ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೆಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಕಲಬುರಗಿ ಬಂದ್ ಗೆ ಕರೆ ನೀಡಲಾಗಿದ್ದು, ಕೆಲವೆಡೆ ಕಿಡಿಗೇಡಿಗಳು ಪ್ರತಿಭಟನೆ ಹೆಸರಲ್ಲಿ ಗೂಂಡಾ ವರ್ತನೆ ಮೆರೆದಿದ್ದಾರೆ.
ಕೈಯಲ್ಲಿ ದೊಣ್ಣೆ ಹಿಡಿದು ರಸ್ತೆಗಳಲ್ಲಿ ಸಾಗಿದ ಕಿಡಿಗೇಡಿಗಳು, ಕೆಲ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ. ರಸ್ತೆಗಳಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ದೊಣ್ಣೆಯಿಂದ ಹೊಡೆದು ಹುಚ್ಚಾಟ ಮೆರೆದಿದ್ದಾರೆ.
ಶಹಬಜಾರ್ ಬಳಿ ಬೈಕ್ ನಲ್ಲಿ ಬರುತ್ತಿದ್ದ ವ್ಯಕ್ತಿಯನ್ನು ತಡೆದು ಬೈಕ್ ಜಖಂಗೊಳಿಸಿದ್ದಾರೆ. ಅಲ್ಲಿದ್ದ ಅಂಗಡಿಗಳಿಗೆ ತೆರಳಿ, ಕುರ್ಚಿಗಳನ್ನು ಹೊರಗೆ ಬಿಸಾಕಿ, ಅಂಗಡಿ ಬಾಗಿಲುಗಳನ್ನು ಮುಚ್ಚಿಸಿದ್ದಾರೆ. ಕೈಯಲ್ಲಿ ದೊಣ್ಣೆ ಹಿಡಿದು ನಗರದಾದ್ಯಂತ ಬೈಕ್ ನಲ್ಲಿ ಸುತ್ತಾಡಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.