ಕಲಬುರಗಿ: ಅಂಬಾ ಭವಾನಿ ಭಕ್ತನೊಬ್ಬ ಲೋಕಕಲ್ಯಾಣಕ್ಕಾಗಿ ತನ್ನ ದೇಹದ ಮೇಲೆ ಘಟ ಸ್ಥಾಪಿಸಿ ಅನ್ನ, ನೀರು ತ್ಯಜಿಸಿ ಮೌನ ವ್ರತ ಮಾಡುತ್ತಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದದಲ್ಲಿ ನಡೆದಿದೆ.
ಅಂಬಾ ಭವಾನಿ ದೇವಿಯ ಪರಮ ಭಕ್ತನೊಬ್ಬ ಲೋಕಕಲ್ಯಾಣಕ್ಕಾಗಿ ದೇಹದ ಮೇಲೆಯೇ ಘಟ ಸ್ಥಾಪನೆ ಮಾಡಿಕೊಂಡು ಆಹಾರ ನೀರು ಬಿಟ್ಟು ಮೌನವಾಗಿ 9 ದಿನಗಳ ಕಾಲ ಕಠಿಣ ವ್ರತ ಮಾಡುತ್ತಿದ್ದು, ಆತನ ದರ್ಶನಕ್ಕಾಗಿ ಜಜ ಸಾಗರವೇ ಹರಿದುಬರುತ್ತಿದೆ.
ಅಂಬಣ್ಣಾ ಪೂಜಾರಿ ಎಂಬುವವರು ತಮ್ಮ ಮನೆಯ ದೇವರ ಕೋಣೆಯಲ್ಲಿ ತಾವು ಮಲಗಿದ್ದಲ್ಲಿಯೇ ದೇಹದ ಮೇಲೆ ಘಟ ಸ್ಥಾಪನೆ ಮಾಡಿಕೊಂಡು ನವರಾತ್ರಿಯ 9 ದಿನಗಳ ಕಾಲ ವ್ರತಾಚರಣೆ ಮಾಡಿದ್ದಾರೆ. 9 ದಿನಗಳಿಂದ ದೇಹದ ಮೇಲೆ ಘಟ ಸ್ಥಾಪನೆ ಮಾಡಿಕೊಂಡು ಕದಲದೇ ಮಲಗಿದ್ದು, ಅನ್ನ ಆಹಾರ, ನೀರೂ ಸೇವಿಸಿಲ್ಲ. ಸೌಚಕ್ಕೂ ಹೋಗದೇ ವ್ರತದಲ್ಲಿದ್ದಾರೆ. ಅಂಬಣ್ಣಾ ಪೂಜಾರಿಯ ಕಠಿಣ ವೃತ ಕಂಡು ಜನರು ಅಚ್ಚರಿಗೊಂಡಿದ್ದಾರೆ.
34 ವರ್ಷದ ಅಂಬಣ್ಣಾ ಮಹಾರಾಷ್ಟ್ರದ ತುಳಜಾಪುರದ ಅಂಬಾ ಭವಾನಿ ದೇವಿಯ ಪರಮ ಭಕ್ತರು. ಚಿಕ್ಕಂದಿನಿಂದಲೂ ದೇವಿ ಭಕ್ತರಾಗಿರುವ ಇವರು ನವರಾತ್ರಿಯ 9 ದಿನಗಳ ಕಾಲ ದೇಹದ ಮೇಲೆ ಘಟ ಸ್ಥಾಪಿಸಿಕೊಂಡು ವ್ರತದಲ್ಲಿರುತ್ತಾರೆ. ಆದರೆ ಈಬಾರಿ ಲೋಕಕಲ್ಯಾಣಕ್ಕಾಗಿ ಈ ವ್ರತ ಕೈಗೊಂಡಿದ್ದು, ಸಾವಿರಾರು ಜನರು ಬಂದು ಅಂಬಣ್ಣಾ ಪೂಜಾರಿ ದರ್ಶನ ಪಡೆದು ಹೋಗುತ್ತಿದ್ದಾರೆ.