![](https://kannadadunia.com/wp-content/uploads/2023/06/d2d6ab62-a340-460e-9421-a4fa620ae758.jpg)
ಕಲಬುರಗಿ: ಕಲುಷಿತ ಆಹಾರ (Contaminated food) ಸೇವಿಸಿ 21 ಮಂದಿ ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದಿದೆ.
ಅಸ್ವಸ್ಥರು ನಿನ್ನೆ ಲಾಡ್ಲೇ ಮಶಾಕ್ ದರ್ಗಾಕ್ಕೆ ಹರಕೆ ತೀರಿಸಲು ಬಂದಿದ್ದರು. ಹರಕೆ ತೀರಿಸಿದ ಬಳಿಕ ಸಾಮೂಹಿಕವಾಗಿ ಊಟ ಸೇವನೆ ಬಳಿಕ ವಾಂತಿ ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.
ಸದ್ಯ 21 ಮಂದಿಗೆ ಆಳಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಸ್ವಸ್ಥರು ವಿಜಯಪುರ ಜಿಲ್ಲೆಯ ಚಡಚಣದ ಡೋಣಿ ನಿವಾಸಿಗಳು ಎಂಬ ಮಾಹಿತಿ ಲಭ್ಯವಾಗಿದೆ.