ನಟ ಅಜಯ್ ದೇವಗನ್, ತಮ್ಮ ಪತ್ನಿ ಕಾಜೋಲ್ ಹಾಗೂ ಮಗ ಯುಗ್ ಜೊತೆ ದುರ್ಗಾ ಪೂಜೆ ಪೆಂಡಾಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದಂಪತಿಗಳ ನಡುವಿನ ತಮಾಷೆಯ ಕ್ಷಣವನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, ಇದು ಈಗ ವೈರಲ್ ಆಗಿದೆ.
ಕ್ಲಿಪ್‌ನಲ್ಲಿ, ಕಾಜೋಲ್, ಅಜಯ್‌ಗೆ ತನ್ನ ಹೆಗಲ ಮೇಲೆ ಕೈ ಹಾಕುವಂತೆ ಸೂಚಿಸಲು ಕೈ ಚಿವುಟಿರುವುದನ್ನು ಕಾಣಬಹುದು. ಇದನ್ನು ನೋಡಿದ ನೆಟ್ಟಿಗರು ಎಲ್ಲರ ಕುಟುಂಬದಲ್ಲೂ ಇದು ಕಾಮನ್ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ವೀಡಿಯೊದಲ್ಲಿ, ಕಾಜೋಲ್, ಅಜಯ್ ದೇವಗನ್ ಮತ್ತು ಅವರ ಮಗ ಯುಗ್ ಕ್ಯಾಮೆರಾಗೆ ಪೋಸ್ ನೀಡುತ್ತಿರುವಾಗ ಕಾಜೋಲ್ ಪತಿ ತನ್ನ ಹೆಗಲ ಮೇಲೆ ಕೈ ಹಾಕುವಂತೆ ಸೂಚಿಸಲು ಕೈ ಚಿವುಟಿದ್ದಾರೆ. ತಕ್ಷಣವೇ ಇದನ್ನು ಅರ್ಥ ಮಾಡಿಕೊಂಡ ಅಜಯ್ ದೇವಗನ್ ಪತ್ನಿ ಹೆಗಲ ಮೇಲೆ ಕೈ ಹಾಕಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ.