ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಎಡಮಂಗಲದಲ್ಲಿ ಎದೆಗೆ ಕತ್ತಿ ಹೊಕ್ಕು ಮಹಿಳೆ ಮೃತಪಟ್ಟಿದ್ದಾರೆ.
ಎಡಮಂಗಲ ಗ್ರಾಮದ ಬಳಕ್ಕದೆ ನಿವಾಸಿ ಶಿವರಾಮ ಅವರ ಪತ್ನಿ ಗೀತಾ(37) ಮೃತಪಟ್ಟವರು ಎಂದು ಹೇಳಲಾಗಿದೆ. ರಬ್ಬರ್ ಟ್ಯಾಪಿಂಗ್ ಮಾಡಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಅವರು ಎಡವಿ ಬಿದ್ದಿದ್ದು, ಈ ವೇಳೆ ಕೈಯಲ್ಲಿದ್ದ ಟ್ಯಾಪಿಂಗ್ ಕತ್ತಿ ಆಕಸ್ಮಿಕವಾಗಿ ಎದೆಗೆ ಹೊಕ್ಕು ಮೃತಪಟ್ಟಿದ್ದಾರೆ.
ಟ್ಯಾಪಿಂಗ್ ಕೆಲಸ ಮುಗಿಸಿ ಮನೆಗೆ ಬರುವಾಗ ಘಟನೆ ನಡೆದಿದೆ. ಎಡವೇ ಬಿದ್ದು ಕತ್ತಿ ಎದೆಯೊಳಗೆ ಹೊಕ್ಕು ಗೀತಾ ಮೃತಪಟ್ಟಿರುವುದಾಗಿ ಪತಿ ಶಿವರಾಮ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.