alex Certify BREAKING NEWS: ಕಬಾಬ್ ಅಂಗಡಿ ಮಾಲೀಕನ ಎಡವಟ್ಟು: ಸಿಲಿಂಡರ್ ಸ್ಫೋಟಕ್ಕೆ ಹೊತ್ತಿ ಉರಿದ ಆಟೋ; 5 ಬೈಕ್ ಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಕಬಾಬ್ ಅಂಗಡಿ ಮಾಲೀಕನ ಎಡವಟ್ಟು: ಸಿಲಿಂಡರ್ ಸ್ಫೋಟಕ್ಕೆ ಹೊತ್ತಿ ಉರಿದ ಆಟೋ; 5 ಬೈಕ್ ಗಳು

ಬೆಂಗಳೂರು: ಕಬಾಬ್ ಅಂಗಡಿ ಮಾಲೀಕನ ಎಡವಟ್ಟಿನಿಂದಾಗಿ ರಸ್ತೆ ಬದಿ ನಿಲ್ಲಿಸಿದ್ದ ಆಟೋ ಹಾಗೂ ಬೈಕ್ ಗಳು ಬೆಂಕಿಗಾಹುತಿಯಾಗಿ, ಹೊತ್ತಿ ಉರಿದ ಘಟನೆ ಬೆಂಗಳೂರಿನ ಈಜಿಪುರದ ವಿವೇಕನಗರದಲ್ಲಿ ನಡೆದಿದೆ.

ಕಬಾಬ್ ಅಂಗಡಿಯಲ್ಲಿ ಸಿಲಿಂಡರ್ ಬದಲಿಸುವಾಗ ಗ್ಯಾಸ್ ಲೀಕ್ ಆಗಿದೆ. ತಕ್ಷಣ ಕಬಾಬ್ ಅಂಗಡಿ ಮಾಲಿಕ ಸಿಲಿಂಡರ್ ಎತ್ತಿ ಎಸೆದಿದ್ದಾನೆ. ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಸಮೇತ ರಸ್ತೆ ಬದಿ ನಿಲ್ಲಿಸಿದ್ದ ಆಟೋ ಮೇಲೆ ಬಿದ್ದಿದೆ. ಬೆಂಕಿ ಹೊತ್ತಿಕೊಂಡು ಉರಿಯಲಾರಂಭಿಸಿದೆ. ಬೆಂಕಿಯ ಕೆನ್ನಾಲಿಗೆ ಅಲ್ಲಿಯೇ ಇದ್ದ 5 ಬೈಕ್ ಗಳಿಗೂ ವ್ಯಾಪಿಸಿದೆ.

ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಆಟೋ ಹಾಗೂ 5 ಬೈಕ್ ಗಳು ಬೆಂಕಿಯಲ್ಲಿ ಧಗ ಧಗನೆ ಹೊತ್ತಿ ಉರಿದಿವೆ. ನೋಡ ನೋಡುತ್ತಿದ್ದಂತೆ ಆಟೋ, ಬೈಕ್ ಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...