ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ. ಗೌತಮ್ ಕಣಕ್ಕಿಳಿದಿದ್ದು, ಬಣ ಬಡಿದಾಟಕ್ಕೆ ಕಾಂಗ್ರೆಸ್ ಬ್ರೇಕ್ ಹಾಕಿದೆ. ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆ ಮಾತನಾಡಿದ ಕೆ.ವಿ.ಗೌತಮ್ ಇದೊಂದು ಅನಿರೀಕ್ಷಿತ ಅವಕಾಶ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಿಂದ ಟಿಕೆಟ್ ಸಿಕ್ಕಿದ್ದು ಅನಿರೀಕ್ಷಿತ ಅವಕಾಶ. ಹಾಗಗೈ ಬೇಡ ಎನ್ನಲು ಆಗಿಲ್ಲ. ಉತ್ತಮವಾದ ಅವಕಾಶ ಗೆದ್ದು ತೋರಿಸುತ್ತೇನೆ ಎಂದು ಹೇಳಿದ್ದಾರೆ.
ನಾನಾಗಿಯೇ ಕೋಲಾರ ಟಿಕೆಟ್ ಬೇಕು ಎಂದು ಕೇಳಿರಲಿಲ್ಲ. ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನನ್ನನ್ನು ಕರೆದು ಕೇಳಿದಾಗ ಬೇಡ ಎನ್ನಲು ಆಗಲಿಲ್ಲ. ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇನೆ ಎಂದು ತಿಳಿಸಿದ್ದಾರೆ.