ಬೆಂಗಳೂರು: ರಾಜ್ಯಕ್ಕೆ ಇಂದು 2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಬರಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಖರೀದಿ ಒಪ್ಪಂದದ ಮೇರೆಗೆ ಲಸಿಕೆ ಪೂರೈಕೆ ಮಾಡಲಾಗುತ್ತಿದೆ. ಪುಣೆಯ ಸೀರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಲಸಿಕೆ ಬರಲಿದೆ.
ರಾಜ್ಯ ಸರ್ಕಾರದ ಆದೇಶದ ಅನ್ವಯ ಇಂದು 2 ಲಕ್ಷ ಡೋಸ್ ಕೋವಿಶೀಲ್ಡ್ ಅನ್ನು ಸ್ವೀಕರಿಸಲಾಗುವುದು. ಇಲ್ಲಿಯವರೆಗೆ 1,24,20,510 ಡೋಸ್ಗಳನ್ನು 1,13,26340(1,01,60,060 ಕೋವಿಶೀಲ್ಡ್ ಮತ್ತು 11,66,280 ಕೋವಾಕ್ಸಿನ್) ಅನ್ನು ಸ್ವೀಕರಿಸಿದ್ದೇವೆ. ಕೇಂದ್ರದ 10,94,170 ಡೋಸ್ (9,50,000 ಕೋವಿಶೀಲ್ಡ್ ಮತ್ತು 1,44,170 ಕೋವಾಕ್ಸಿನ್) ಗಳನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.