ಬೆಂಗಳೂರು: ವಿದೇಶದಿಂದ ಬಂದಿರುವ 14 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್ ನಿಂದ ಬಂದಿರುವ 14 ಜನರಿಗೆ ಕೊರೋನಾ ಪಾಸಿಟಿವ್ ಇದೆ. ಕೇಂದ್ರ ಸರ್ಕಾರದ ಮೂಲಕ ಮಾದರಿಯನ್ನು ಲ್ಯಾಬ್ ಗೆ ಕಳುಹಿಸಲಾಗಿದೆ. ಅವರಿಗೆ ಹೊಸ ಪ್ರಭೇದದ ಸೋಂಕು ಇದೆಯೇ ಎಂಬ ಬಗ್ಗೆ ಇಂದು ಅಥವಾ ನಾಳೆ ವರದಿ ಬರಲಿದೆ. ಹೊಸ ಪ್ರಭೇದದ ಸೋಂಕು ತಗುಲಿದ್ದರೆ ಕೇಂದ್ರ ಸರ್ಕಾರವೇ ತಿಳಿಸುತ್ತದೆ ಎಂದು ಹೇಳಿದ್ದಾರೆ.
14 ಜನರಿಗೆ ಕೊರೊನಾ ಸೋಂಕು ತಗುಲಿದ್ದು ಹೊಸ ಪ್ರಭೇದದ ಸೋಂಕು ತಗುಲಿದ್ದರೆ ಇಂದು ಅಥವಾ ನಾಳೆ ಕೈಸೇರಲಿರುವ ವರದಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ.