ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.
ಕರ್ನಾಟಕ ಸರ್ಕಾರದ ಉದ್ಯೋಗ ಮಾಡ ಬಯಸುವವರಿಗೆ ಹಾಗೂ ಟೀಚಿಂಗ್ ಫೀಲ್ಡ್ನಲ್ಲಿ ಕೆಲಸ ಮಾಡಬೇಕು ಎಂದುಕೊಂಡವರಿಗೆ ಇದು ಒಳ್ಳೆಯ ಅವಕಾಶವಾಗಿದೆ. ಅರ್ಜಿ ಸಲ್ಲಿಕೆ ದಿನಾಂಕ ಸೆ.10 ರಿಂದ ಆರಂಭವಾಗಿದ್ದು ಸೆ.30 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ಪಾವತಿಸಲು ಅಕ್ಟೋಬರ್ 3ರ ವರೆಗೆ ಅವಕಾಶ ನೀಡಲಾಗಿದ್ದು. . ಕೆ-ಸೆಟ್ ಪರೀಕ್ಷೆಯು ನವೆಂಬರ್ 5ರಂದು ನಡೆಯಲಿದೆ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/09/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 30, 2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಅಕ್ಟೋಬರ್ 3, 2023
ಪರೀಕ್ಷೆ ನಡೆಯುವ ದಿನ: ನವೆಂಬರ್ 5, 2023
ಅರ್ಜಿ ಸಲ್ಲಿಕೆ ಪ್ರಕ್ರಿಯೆ
* ಅಧಿಕೃತ ವೆಬ್‌ಸೈಟ್ https://karnemakaone.kar.nic.in/pqrs/ApplicationForm_JA_org.aspx?utm_source=DH-MoreFromPub&utm_medium=DH-app&utm_campaign=DH ನೇರ ಲಿಂಕ್ ಮೂಲಕ ಅರ್ಜಿ ಸಲ್ಲಿಕೆ ಓಪನ್ ಮಾಡಿಕೊಳ್ಳಿ.
* ಕಾಣಿಸುವ ಪರದೆಯಲ್ಲಿ ನಿಮಗೆ ಕೇಳಲಾಗುವ ಸೂಕ್ತ ಮಾಹಿತಿ ನಮೂದಿಸಿ.
* ಎಲ್ಲ ವಿವರ ದಾಖಲಿಸಿದ ನಂತರ ಸಲ್ಲಿಕೆಗೂ (Submit) ಮೊದಲು ನಮೂದಿಸಿದ ವಿವಿರಗಳು/ಮಾಹಿತಿ ಸರಿಯಾಗಿದೆಯೇ ಇಲ್ಲ ಎಂದು ಚೆಕ್ ಮಾಡಿ ನಂತರ ಸಬ್ಮಿಟ್ ಕೊಡಿ.
* ಇದೆಲ್ಲ ಪ್ರಕ್ರಿಯೆ ಮೂಲಕ ಮುಂದಿನ ರೆಫರೆನ್ಸ್‌ಗೆಂದು ಸಲ್ಲಿಕೆಯಾದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.