
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋ ಬಳಸಿಕೊಂಡು ಸುಳ್ಳು ಆರೋಪಗಳನ್ನು ಮಾಡುತ್ತ ಗೌರವಕ್ಕೆ ಧಕ್ಕೆಯುಂಟುಮಾಡಿ ಕಿಡಿಗೇಡಿಗಳು ಕಿರುಕುಳ ನಿಡುತ್ತಿದ್ದಾರೆ ಎಂದು ಆರೋಪಿ ಖ್ಯಾತ ಸೀರಿಯಲ್ ನಿರ್ದೇಶಕ ಕೆ.ಎಸ್.ರಾಮ್ ಜೀ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ಪಶ್ಚಿಮ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜನವರಿ 24ರಿಂದ ಇನ್ ಸ್ಟಾಗ್ರಾಂ ಖಾತೆಯೊಂದರಲ್ಲಿ ರಾಮ್ ಜೀ ಫೋಟೋ ಬಳಸಿ , ಅವರ ವಿರುದ್ಧ ನಟಿಯರಿಗೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಈ ರೀತಿ ಸುಳ್ಳು ಆರೋಪ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಸೃಷ್ಟಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಮ್ ಜೀ ದೂರು ನೀಡಿದ್ದಾರೆ.
ಕೆ.ಎಸ್.ರಾಮ್ ಜೀ, ಕನ್ನಡ ಕಿರುತೆರೆ ಲೋಕದ ಖ್ಯತ ನಿರ್ದೇಶಕರಾಗಿದ್ದಾರೆ. ‘ರಾಮಾಚಾರಿ’, ‘ಮಂಗಳಗೌರಿ ಮದುವೆ’, ‘ನಾಗಿಣಿ-2’ ಸೇರಿದಂತೆ ಸಾಲು ಸಾಲು ಹಿಟ್ ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದಾರೆ. ಅಲ್ಲದೇ ‘ಹೆಜ್ಜಾರು’ ಎಂಬ ಸಿನಿಮಾಗೂ ನಿರ್ದೇಶನ ಮಾಡಿದ್ದಾರೆ.