ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದು ವಾಗ್ದಾಳಿ ನಡೆಸುತ್ತಿದ್ದಾರೆ. ಈಶ್ವರಪ್ಪ ಕೂಡ ತಮ್ಮದೇ ಶೈಲಿಯಲ್ಲಿ ಕಿಡಿಕಾರುತ್ತಿದ್ದಾರೆ.
ಈಶ್ವರಪ್ಪಗೆ ಚೀಟಿ ಹಂಚಲು ಜನರಿಲ್ಲ ಎಂಬ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ವ್ಯಂಗ್ಯಕ್ಕೆ ತಿರುಗೇಟು ನೀಡಿರುವ ಈಶ್ವರಪ್ಪ ತಲೆಕೆಟ್ಟು ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಬಿಜೆಪಿ ಅಭ್ಯರ್ಥಿಪರ ನಾಮಪತ್ರ ಸಲ್ಲಿಸಲು ಮೂರುವರೆ ಮುಖ್ಯಮಂತ್ರಿಗಳು ಬಂದಿದ್ದಾರೆ. ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ಅರಗ ಸೇರಿದಂತೆ ಮೂರುವರೆ ಸಿಎಂ ಗಳು ಬಂದಿದ್ದಾರೆ. ಪರಿವಾರದ ಯುವಕರು ನನ್ನ ಸಿದ್ಧಾಂತ ಮೆಚ್ಚಿ ಬೆಂಬಲ ನೀಡಿದ್ದಾರೆ. ಅರಗ ಜ್ಞಾನೇಂದ್ರಗೆ ತೀರ್ಥಹಳ್ಳಿ ಕ್ಷೇತ್ರದ ಬಗ್ಗೆಯೇ ಚಿಂತೆಯಾಗಿದೆ. ಹಾಗಾಗಿ ತಲೆಕೆಟ್ಟು ನನ್ನ ಬಗ್ಗೆ ಟೀಕೆ ಮಾಡ್ತಿದ್ದಾರೆ ಎಂದು ಟಂಗ್ ನೀಡಿದ್ದಾರೆ.
ಅರಗ ಜ್ಞಾನೇಂದ್ರ ಕ್ಷೇತ್ರದಲ್ಲಿ ಮೊದಲು ನನ್ನ ಬೆಂಬಲಿಗರನ್ನು ನೋಡಲಿ. ನಂತರ ಮಾತನಾಡಲಿ ಎಂದು ಈಶ್ವರಪ್ಪ ಗುಡುಗಿದ್ದಾರೆ.