
ತುಮಕೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಮೇಲೆ ಹನಿಟ್ರ್ಯಾಪ್ ಯತ್ನ ಪ್ರಕರಣದ ಬೆನ್ನಲ್ಲೇ ಸಚಿವರ ಪುತ್ರ ರಾಜೇಂದ್ರ ರಾಜಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ. ಕುಣಿಗಲ್ ಶಾಸಕ ಡಾ.ರಂಗನಾಥ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮಧುಗಿರಿಯಲ್ಲಿ ಮಾತನಡಿದ ರಾಜೇಂದ್ರ ರಾಜಣ್ಣ, ಕುಣಿಗಲ್ ಕ್ಷೇತ್ರದ ಶಾಸಕರು ಧಮಿ ಹಾಕುತ್ತಿದ್ದಾರೆ. ಲಿಂಕ್ ಕೆನಲ್ ಗೆ ಅಡ್ಡಿ ಮಾಡುತ್ತಿದ್ದೇವೆ ಎಂದು ಕರೆ ಮಾಡಿ ಎರಡು ತಿಂಗಳಿಂದ ನಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ನಿಂದ ಮಧುಗಿರಿಗೆ ತೊಂದರೆಯಾಗುತ್ತಿದೆ. ಇದರಿಂದ ಮಧುಗಿರಿ, ಕೊರಟಗೀ ಭಾಗದ ಜನರು ಏನು ಮಾಡೋಣ? ಎಂದು ಪ್ರಶ್ನಿಸಿದ್ದಾರೆ. ಕುಡಿಯುವ ನೀರನ್ನು ದಾರಿ ಮಧ್ಯೆಯೇ ಲಿಂಕ್ ಕೆನಲ ಮೂಲಕ ತೆಗೆದುಕೊಂಡರೆ ನಮ್ಮ ಗತಿಯೇನು? ಎಂದು ಕೇಳಿದ್ದಾರೆ.