ಬೆಂಗಳೂರು: ಪಡಿತರ ಚೀಟಿದಾರರಿಗೆ ಆಹಾರ ಸಚಿವ ಕೆ. ಗೋಪಾಲಯ್ಯ ಸಿಹಿ ಸುದ್ದಿ ನೀಡಿದ್ದಾರೆ. ಪಡಿತರ ಚೀಟಿದಾರರಿಗೆ ಸಾರಯುಕ್ತ ಅಕ್ಕಿ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ. ಸಿಎಂ ಯಡಿಯೂರಪ್ಪ ಸೂಚನೆಯಂತೆ ಈಗಾಗಲೇ ಸಿದ್ಧತೆ ಕೈಗೊಳ್ಳಲಾಗುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಏಪ್ರಿಲ್ ನಿಂದ ಸಾರಯುಕ್ತ ಅಕ್ಕಿ ವಿತರಣೆ ಮಾಡಲಾಗುವುದು ಎಂದು ಹೇಳಲಾಗಿದೆ.
ಸಾಮಾನ್ಯ ಅಕ್ಕಿಯೊಂದಿಗೆ ಸಾರಯುಕ್ತ ಅಕ್ಕಿ ಮಿಶ್ರಣ ಮಾಡಿ ಕೊಡಲಾಗುವುದು. ಅಕ್ಕಿ ನುಚ್ಚು ಪುಡಿ ಮಾಡಿ ಫೋಲಿಕ್ ಆಸಿಡ್, ಜೀವಸತ್ವ, ಕಬ್ಬಿಣಾಂಶಗಳನ್ನು ಸೇರಿಸಿ ಸಂಸ್ಕರಿಸಿ ಸಾಮಾನ್ಯ ಅಕ್ಕಿ ಕಾಳಿನ ರೀತಿಯಲ್ಲಿ ತಯಾರಿಸಿ ಸಾಮಾನ್ಯ ಅಕ್ಕಿ ಜೊತೆಗೆ ಮಿಶ್ರಣ ಮಾಡಿಕೊಡಲಾಗುತ್ತದೆ. ಇದು ರಕ್ತ ಹೀನತೆ, ಅಪೌಷ್ಟಿಕತೆ ನಿವಾರಣೆ. ಮಧುಮೇಹ, ಬಿಪಿಯಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಜೊತೆಗೆ ಪಡಿತರ ಅಕ್ಕಿಯ ಕಾಳದಂಧೆಗೆ ಕಡಿವಾಣ ಹಾಕಬಹುದಾಗಿದೆ ಎಂದು ಹೇಳಲಾಗಿದೆ.