2002ರ ಗುಜರಾತ್ ಗಲಭೆ ಹಾಗೂ 1984ರ ಸಿಖ್ ವಿರೋಧಿ ದಂಗೆಗಳ ತನಿಖೆಗಳ ಆಯೋಗದ ನೇತೃತ್ವ ವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಜಿ.ಟಿ. ನಾನಾವತಿ ಅಹಮದಾಬಾದ್ ನಿವಾಸದಲ್ಲಿ ನಿಧನರಾಗಿದ್ದಾರೆ. ಜಿ.ಟಿ. ನಾನಾವತಿ ಅವರಿಗೆ 86 ವರ್ಷ ವಯಸ್ಸಾಗಿತ್ತು.
ಗೋಧ್ರಾ ರೈಲು ಹತ್ಯಾಕಾಂಡ ಹಾಗೂ ಗುಜರಾತ್ನಲ್ಲಿ ಸುಮಾರು 1200ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ಗಲಭೆಗಳ ತನಿಖೆಗೆ ನೇಮಕಗೊಂಡ ನ್ಯಾಯಮೂರ್ತಿ ನಾನಾವತಿ ಆಯೋಗವು ಈಗಿನ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವಾಲಯ ಮತ್ತು ಪೊಲೀಸರಿಗೆ ಕ್ಲೀನ್ಚಿಟ್ ನೀಡಿದೆ. ವಿಚಾರಣೆಯ ಸಂದರ್ಭದಲ್ಲಿ ಗುಜರಾತ್ನ ಆಗಿನ ಸಿಎಂ ಆಗಿದ್ದ ಮೋದಿಗೆ ಆಯೋಗ ಸಮನ್ಸ್ ನೀಡಿರಲಿಲ್ಲ.
ನಿವೃತ್ತ ನ್ಯಾಯಮೂರ್ತಿ ನಾನಾವತಿ 1958ರಲ್ಲಿ ಬಾಂಬೆ ಹೈಕೋರ್ಟ್ನಲ್ಲಿ ವಕೀಲರಾಗಿ ನೇಮಕವಾಗಿದ್ದರು. ಹಾಗೂ ಸರ್ಕಾರಿ ನ್ಯಾಯವಾದಿಗಳ ಸಮಿತಿಯಲ್ಲಿ ಇದ್ದರು. ಜುಲೈ 1979ರಲ್ಲಿ ಗುಜರಾತ್ ಹೈಕೋರ್ಟ್ನಲ್ಲಿ ಖಾಯಂ ಜಡ್ಜ್ ಆಗಿ ನೇಮಕಗೊಂಡಿದ್ದರು ಬಳಿಕ ಅವರನ್ನು 1993ರಲ್ಲಿ ಒರಿಸ್ಸಾ ಹೈಕೋರ್ಟ್ಗೆ ವರ್ಗಾಯಿಸಲಾಗಿತ್ತು.
1994ರಲ್ಲಿ ನಾನಾವತಿ ಒರಿಶಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 1994ರಲ್ಲಿ ರಾಜ್ಯ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಮಾರ್ಚ್ 1995ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು ಹಾಗೂ 2000ನೇ ಇಸ್ವಿಯಲ್ಲಿ ಸೇವೆಯಿಂದ ನಿವೃತ್ತಿಯಾದರು.