ಹೈಹೀಲ್‌ನಿಂದ ಫ್ಲಾಟ್‌ಗೆ ಮಾರ್ಪಾಡು ಮಾಡಬಲ್ಲ ಮಹಿಳಾ ಪಾದರಕ್ಷೆ ಜೋಡಿಯೊಂದು ಟ್ವಿಟರ್‌ನಲ್ಲಿ ಸದ್ದು ಮಾಡಿದೆ. ’ಪ್ಯಾಶನ್ ಫುಟ್‌ವೇರ್’ ಬ್ರಾಂಡ್ ತಯಾರಿಸಿದ ಈ ಆವಿಷ್ಕಾರೀ ಪಾದರಕ್ಷೆಯು ಥರಾವರಿ ವಿನ್ಯಾಸಗಳ ವಸ್ತ್ರಗಳಿಗೆ ಹೊಂದಿಕೆಯಾಗುತ್ತದೆ ಎನ್ನಲಾಗಿದೆ.
ಬಿಗ್ ಕೇ ಹಸರಿನ ಜನಪ್ರಿಯ ಟ್ವಿಟರ್ ಹ್ಯಾಂಡಲ್ ಒಂದು ಟಿಕ್‌ಟಾಕ್ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಪ್ಯಾಶನ್ ಫುಟ್‌ವೇರ್‌ನ ಸಿಇಓ ಹೇಲೇ ಪವೋನ್ ಈ ಚಪ್ಪಲಿಗಳ ಡೆಮೋ ಕೊಡುತ್ತಿರುವುದನ್ನು ನೋಡಬಹುದಾಗಿದೆ.
ಈ ವಿಡಿಯೋ ಕ್ಲಿಪ್‌ಗೆ 1.4 ಲಕ್ಷಕ್ಕೂ ಹೆಚ್ಚಿನ ಲೈಕ್‌ಗಳು ಸಿಕ್ಕಿದ್ದು, ಬ್ರಾಂಡ್ ಮೇಲೆ ಭಾರೀ ಆಸಕ್ತಿ ಮೂಡಿದೆ.