alex Certify ‘ಜಸ್ಟ್ ಪಾಸ್’ ಚಿತ್ರದ ವಿಡಿಯೋ ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಜಸ್ಟ್ ಪಾಸ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಫೆಬ್ರವರಿ 9ರಂದು ರಾಜ್ಯದಾದ್ಯಂತ ತೆರೆಕಂಡಿದ್ದ ಕೆಎಮ್ ರಾಘು ನಿರ್ದೇಶನದ ‘ಜಸ್ಟ್ ಪಾಸ್’ ಸಿನಿಮಾ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಕುಟುಂಬ ಸಮೇತ ಈ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ.

‘ಜಸ್ಟ್ ಪಾಸ್’ ಚಿತ್ರ ತಂಡ ಇಂದು ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ. ”ಓದು ಓದು ಛಲ ಬಿಡದೆ” ಎಂಬ ವಿದ್ಯಾರ್ಥಿಗಳ ಕುರಿತ ಈ ಹಾಡಿಗೆ ಹೇಮಂತ್ ಕುಮಾರ್ ಧ್ವನಿಯಾಗಿದ್ದು, ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಕವಿರಾಜ್ ಸಾಹಿತ್ಯವಿದೆ.

ರಾಯ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಕೆವಿ ಶಶಿಧರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಶ್ರೀ ಮಹಾದೇವ್ ಮತ್ತು ಪ್ರಣತಿ ಸೇರಿದಂತೆ ಸುಚೇಂದ್ರ ಪ್ರಸಾದ್, ಸಾಧು ಕೋಕಿಲ, ರಂಗಾಯಣ ರಘು, ಗೋವಿಂದೇಗೌಡ, ದಾನಪ್ಪ, ದೀಪಕ್, ಡುಮ್ಮ ವಿಶ್ವಾಸ್ ಬಣ್ಣ ಹಚ್ಚಿದ್ದಾರೆ. ಕೆ ಎಂ ಪ್ರಕಾಶ್ ಸಂಕಲನ, ವಿಜಯ್ ಕುಮಾರ್ ಬಾವಿಕಟ್ಟೆ ಛಾಯಾಗ್ರಹಣವಿದ್ದು, ಕೆ ಎಮ್ ರಾಘು ಮತ್ತು ರಘು ನಿಡುವಳ್ಳಿ ಡೈಲಾಗ್ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...