ಪಿಂಚಣಿ ಯೋಜನೆ ತೆಗೆದುಕೊಳ್ಳುವ ಮೊದಲು ಯಾವುದು ಬೆಸ್ಟ್ ಎಂಬುದನ್ನು ತಿಳಿದುಕೊಳ್ಳಬೇಕು. ಭಾರತೀಯ ಜೀವ ವಿಮಾ ನಿಗಮ, ಪಿಂಚಣಿಯ ಉತ್ತಮ ಯೋಜನೆ ತಂದಿದೆ. ಈ ಪಾಲಿಸಿ ತೆಗೆದುಕೊಳ್ಳುವವರು, ಒಮ್ಮೆ ಪ್ರೀಮಿಯಂ ಪಾವತಿಸಿದ್ರೆ ಸಾಕು. ಜೀವನಪರ್ಯಂತ ಪಿಂಚಣಿ ಪಡೆಯಬಹುದು. ಇದಕ್ಕೆ ಸರಳ ಪಿಂಚಣಿ ಎಂದು ಹೆಸರಿಡಲಾಗಿದೆ.
ಎಲ್ಐಸಿ ಸರಳ ಪಿಂಚಣಿ ಯೋಜನೆ ಒಂದೇ ಪ್ರೀಮಿಯಂ ಯೋಜನೆಯಾಗಿದೆ. ಈ ಯೋಜನೆ ಜುಲೈ 1 ರಿಂದ ಪ್ರಾರಂಭವಾಗಿದ್ದು, ಸರಳ ಪಿಂಚಣಿಯನ್ನು ಎರಡು ರೀತಿಯಲ್ಲಿ ಪಡೆಯಬಹುದು. ಒಂದು ಜೀವನ ವರ್ಷಾಶನವಾಗಿದ್ದರೆ ಇನ್ನೊಂದು ಜಂಟಿ ಯೋಜನೆಯಾಗಿದೆ. ಪಿಂಚಣಿದಾರ ಬದುಕಿರುವವರೆಗೂ ಪಿಂಚಣಿ ಸಿಗುತ್ತದೆ. ನಂತ್ರ ನಾಮಿನಿಗೆ ಹಣ ಸಿಗುತ್ತದೆ.
ಜಂಟಿ ಯೋಜನೆಯಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಕವರೇಜ್ ಪಡೆಯುತ್ತಾರೆ. ಒಬ್ಬರು ಸಾವನ್ನಪ್ಪಿದ್ರೆ ಇನ್ನೊಬ್ಬರಿಗೆ ಪಿಂಚಣಿ ಸಿಗುತ್ತದೆ. ಪ್ರತಿ ತಿಂಗಳು ಅಥವಾ ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಇದ್ರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಪಡೆಯಬೇಕು. ಕನಿಷ್ಠ 12,000 ಹೂಡಿಕೆ ಮಾಡಬೇಕಾಗುತ್ತದೆ. 40 ರಿಂದ 80 ವರ್ಷ ವಯಸ್ಸಿನವರು ಪಡೆಯಬಹುದು.