ನಿಮ್ಮ ಮುಖದಷ್ಟು ಕುತ್ತಿಗೆ ಅಂದವಾಗಿಲ್ಲವೇ? ಕುತ್ತಿಗೆಯ ಭಾಗ ಹೆಚ್ಚು ಸುಕ್ಕುಗಟ್ಟಿದೆಯೇ? ಹೆಚ್ಚು ಹೊತ್ತು ಮೊಬೈಲ್ ನೋಡುವುದೂ ಇದಕ್ಕೊಂದು ಕಾರಣವಿರಬಹುದು. ಕತ್ತಿನ ಚರ್ಮದ ಮೇಲೆ ಕಡಿಮೆ ಒತ್ತಡ ಬೀಳುವಂತೆ ಮಾಡುವ ಮೂಲಕ ನೀವು ಕುತ್ತಿಗೆ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
ಮುಖಕ್ಕೆ ನೀವು ಯಾವ ಕ್ರೀಮ್ ಹಚ್ಚಿಕೊಳ್ಳುತ್ತೀರೋ ಅದನ್ನು ನಿಮ್ಮ ಕುತ್ತಿಗೆಯ ಹಿಂಭಾಗ ಹಾಗೂ ಮುಂಭಾಗಕ್ಕೂ ಹಚ್ಚಿಕೊಳ್ಳಿ. ಇದರಿಂದ ಕುತ್ತಿಗೆಯಲ್ಲಿ ಗೆರೆಗಳು ಮೂಡುವುದನ್ನು ತಪ್ಪಿಸಬಹುದು. ಇವು ತ್ವಚೆಗೆ ಪೋಷಣೆಯನ್ನೂ ನೀಡುತ್ತದೆ.
ಬಿಸಿಲಿಗೆ ಹೋಗುವ ಮುನ್ನ ಕುತ್ತಿಗೆಗೆ ಸನ್ ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುವುದರಿಂದ ಸೂರ್ಯನ ಕಿರಣ ಮತ್ತು ಧೂಳಿನಿಂದ ತ್ವಚೆ ಮಂಕಾಗುವುದನ್ನು ತಡೆಯಬಹುದು.
ಮುಖ ತೊಳೆಯುವಾಗ ಕುತ್ತಿಗೆಗೂ ನೀರು ಹಾಕಿ ಒದ್ದೆ ಮಾಡಿ ತೊಳೆದುಕೊಳ್ಳಿ. ಇಲ್ಲವಾದರೆ ಆ ಭಾಗ ಹೆಚ್ಚು ಕಪ್ಪಾಗಿ, ಕ್ರಮೇಣ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ.