
ಬದಲಾದ ಜೀವನ ಶೈಲಿಯಲ್ಲಿ ವ್ಯಾಯಾಮ ಮಾಡಲು ಸಮಯ ಸಿಗ್ತಿಲ್ಲ. ಜಿಮ್ ಗೆ ಹೋಗಲು ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಜನರು ಮಲಗುವ ಮೊದಲು ಕೇವಲ 8 ನಿಮಿಷಗಳ ಕಾಲ ಸಣ್ಣ ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಬಹುದು. ರಾತ್ರಿ ಮಲಗುವ ಮೊದಲು ನೀವು ಮಾಡುವ ಈ ಸಣ್ಣ ವ್ಯಾಯಾಮಗಳು ನಿಮ್ಮ ಆರೋಗ್ಯವನ್ನು ಕಾಪಾಡುತ್ತವೆ.
ಟಿವಿ ನೋಡ್ತಾ ಅಥವಾ ಸಂಗೀತ ಕೇಳ್ತಾ ಈ ವ್ಯಾಯಾಮ ಮಾಡಬಹುದು. ಮೊದಲು ಕೈಗಳನ್ನು ಹಿಂದೆ, ಮುಂದೆ ಬಲಕ್ಕೆ,ಎಡಕ್ಕೆ ತಿರುಗಿಸಿ. ಒಂದು ಕಾಲನ್ನು ಇನ್ನೊಂದು ಕೈಗಳಿಂದ ಮೇಲಕ್ಕೆ ಎತ್ತಿ. ನಂತ್ರ ಇನ್ನೊಂದು ಕೈನಿಂದ ಇನ್ನೊಂದು ಕಾಲನ್ನು ಮೇಲಕ್ಕೆ ಎತ್ತಿ. ಇದನ್ನು ಅರ್ಧ ನಿಮಿಷ ಮಾಡಬೇಕು.
ಇದಾದ ನಂತ್ರ ಬಸ್ಕಿ ಹೊಡೆಯಬೇಕು. ಈ ವೇಳೆ ಎರಡೂ ಕೈಗಳು ನೇರವಾಗಿರಬೇಕು. ಇದನ್ನು ಒಂದು ನಿಮಿಷ ಮಾಡಬೇಕು. ಮೊಣಕಾಲಿನಲ್ಲಿ ಕುಳಿತುಕೊಂಡು ಕೈಗಳನ್ನು ನೆಲಕ್ಕಿಟ್ಟು ಪ್ರಾಣಿ ಬಂಗಿಗೆ ಬನ್ನಿ. ನಂತ್ರ ಒಂದು ಕಾಲನ್ನು ಮಾತ್ರ ಮೇಲಕ್ಕೆ ಎತ್ತಿ. ಅದನ್ನು ನಿಧಾನವಾಗಿ ಕೆಳಗಿಳಿಸಿ, ಇನ್ನೊಂದು ಕಾಲನ್ನು ಎತ್ತಿ. ಇದನ್ನು ಒಂದು ನಿಮಿಷ ಮಾಡಬೇಕು.
ಇದಾದ ಮೇಲೆ ಒಂದು ನಿಮಿಷ ಪುಷ್ ಅಪ್ ಮಾಡಿ. ಇದಾದ ಮೇಲೆ ಸ್ಕ್ವಾಟ್ ಮತ್ತು ಸೈಡ್ ಕ್ರಂಚ್ ಇವೆರಡನ್ನೂ ಒಂದೊಂದು ನಿಮಿಷ ಮಾಡಿ. ಕೈಗಳಿಂದ ಪಾದವನ್ನು ಸ್ಪರ್ಶಿಸಬೇಕು. ಎಡಗೈನಿಂದ ಬಲ ಕಾಲಿನ ಹೆಬ್ಬೆರಳನ್ನು ಸ್ಪರ್ಶಿಸಬೇಕು. ಹಾಗೆ ಬಲಗೈನಿಂದ ಎಡ ಹೆಬ್ಬೆರಳನ್ನು ಸ್ಪರ್ಶಿಸಬೇಕು. ಇದನ್ನೂ ಒಂದು ನಿಮಿಷ ಮಾಡಬೇಕು. ಪ್ರತಿ ರಾತ್ರಿ ಮಲಗುವ ಮೊದಲು ಈ ವ್ಯಾಯಾಮಗಳನ್ನು ಮಾಡುವುದ್ರಿಂದ ಉತ್ತಮ ನಿದ್ರೆ ಬರುವ ಜೊತೆಗೆ ಸದೃಢವಾಗಿರುತ್ತೀರಿ.