ಹಾಲಿವುಡ್ ಸ್ಟಾರ್ ನಿರ್ದೆಶಕ ಸ್ಟಿವನ್ ಸ್ಟಿಲ್ಬರ್ಗ್ ಕನಸಿನ ಕೂಸಾಗಿದ್ದ ’ ಜುರಾಸಿಕ್ ಪಾರ್ಕ್’ ಈ ಸಿನೆಮಾ ನೋಡಿದ್ಮೇಲೆಯೇ ಈ ಭೂಮಿ ಮೇಲೆ ಇಂತಹದ್ದೊಂದು ದೈತ್ಯ ಜೀವಿಗಳು ಇತ್ತು ಅಂತ ಗೊತ್ತಾಗಿದ್ದು.
ಈ ಸಿನೆಮಾ ಹಿಟ್ ಆದ್ಮೇಲೆ ಜನರು ಜುರಾಸಿಕ್ ಪಾರ್ಕ್ ಅಂತ ಬರೆದಿರುವ ಟೀ ಶರ್ಟ್, ಬ್ಯಾಗ್, ಕ್ಯಾಪ್ಗಳು ಫ್ಯಾಶನ್ ಆಗ್ಹೋಗಿದ್ದವು. ಕೆಲವರಂತೂ ತಮ್ಮ ತಮ್ಮ ವಾಹನದ ಮೇಲೂ ಜುರಾಸಿಕ್ ಪಾರ್ಕ್ ಅನ್ನೊ ಸ್ಟಿಕರ್ನ್ನ ಅಂಟಿಸಿಕೊಳ್ಳೊರು. ಈಗ ಇದೇ ಸ್ಟಿಕರ್ ಮತ್ತೆ ವೈರಲ್ ಆಗಿದೆ. ಆದರೆ ಇಲ್ಲಿ ಒಂದು ಚಿಕ್ಕ ಬದಲಾವಣೆಯನ್ನ ನೋಡಬಹುದು ಅದೇನೆಂದ್ರೆ, ಈ ಸ್ಟಿಕರ್ ಈಗ ಭಾರತೀಯರಿಗೆ ತಕ್ಕಂತೆ ಬದಲಾಗಿದೆ.
ಭಾರತದ ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾದ ಆನಂದ್ ಮಹೀಂದ್ರಾ ಅವರು, ಟ್ವಿಟ್ಟರ್ ಅಕೌಂಟ್ನಲ್ಲಿ ಫೋಟೋ ಒಂದನ್ನ ಪೋಸ್ಟ್ ಮಾಡಿದ್ದಾರೆ. ಅದು ಜೀಪ್ ಒಂದಕ್ಕೆ ಹಚ್ಚಿರುವ ಜುರಾಸಿಕ್ ಪಾರ್ಕ್ ನ ಸ್ಟಿಕರ್ ಆಗಿದೆ. ಈ ರೀತಿಯ ಸ್ಟಿಕರ್ಗಳನ್ನ ಸಿನೆಮಾಗಳಲ್ಲೂ ನೋಡಿರ್ತಿರಾ. ಆದರೆ ಇಲ್ಲಿ ಇದೇ ಸ್ಟಿಕರ್ಗೆ ದೇಸಿ ಟಚ್ ಕೊಡಲಾಗಿದೆ. ಅದೇನಂದರೆ, ಇಲ್ಲಿ ಡೈನೋಸಾರ್ ಚಿತ್ರವೇನೋ ಇದೆ. ಆಧರೆ ಹೆಸರು ಮಾತ್ರ ಬದಲಾಗಿದೆ. ಆ ಹೆಸರೇ ’ಶಿವಾಜಿ ಪಾರ್ಕ್’ ಇದು ಒಂದು ರೀತಿಯಲ್ಲಿ ಭಾರತೀಯತೆಗೆ ತಕ್ಕಂತೆ ಬದಲಾಗೋದು. ಅರ್ಥಾತ್ ಭಾರತೀಕರಣ.
ಇದು ಪಾರ್ಕ್ ಒಂದರ ಹೆಸರಾಗಿದ್ದು, ಪ್ರವಾಸಿಗರನ್ನ ಆಕರ್ಷಿಸಲು ಈ ರೀತಿ ಹೆಸರಲ್ಲಿ ಬದಲಾವಣೆ ಮಾಡಲಾಗಿದೆ. ಇದನ್ನ ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿರುವ ಆನಂದ್ ಮಹೀಂದ್ರಾ ’ಇದನ್ನ ಭಾರತೀಕರಣ ಅನ್ನಬಹುದು.ಕೇವಲ ಮುಂಬೈನಲ್ಲಿ ಮಾತ್ರ ಅಲ್ಲ ದೇಶದ ಮೂಲೆ-ಮೂಲೆಯಲ್ಲೂ ಈ ಕ್ರಿಯೆಟಿವಿಟಿ ಅನ್ನಹುದು.’ ಎಂದು ಬರೆದಿದ್ಧಾರೆ.
ನೆಟ್ಟಿಗರು ಸಹ ವೈರಲ್ ಆಗಿರುವ ಈ ಫೋಟೋ ನೋಡಿ, ಬೆರಗಾಗಿ ಹೋಗಿದ್ದಾರೆ. ಅಷ್ಟೆ ಅಲ್ಲ ಇದಕ್ಕೆ ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಒಬ್ಬರು ’ಇದು ಆಲೂ ಟಿಕ್ಕಿಯನ್ನ ಕೊಟ್ಟು ಬರ್ಗರ್ ತಿನ್ನಿ ಅಂತ ಹೇಳ್ತಿರೋ ಹಾಗಿದೆ’ ಎಂದು ಬರೆದಿದ್ದಾರೆ. ಇನ್ನೊಬ್ಬರು ವಿದೇಶಿಯರಿಂದ ನಕಲು ಮಾಡಿ ಅದರ ಮೇಲೆ ಭಾರತದ ಹೆಸರು ಅಂಟಿಸುವುದು, ಭಾರತೀಯರು ಹಳೆ ಅಭ್ಯಾಸ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮಗನಿಸಿದ್ದನ್ನ ಕಾಮೆಂಟ್ ಮಾಡಿದ್ದಾರೆ.