ಭಾರತದಲ್ಲಿ ಕೋವಿಡ್ ಮತ್ತೆ ರಣಕೇಕೆ ಹಾಕುತ್ತಿದೆಯೇ ?ವೈದ್ಯಕೀಯ ಕ್ಷೇತ್ರದಲ್ಲಿ ಹೀಗೊಂದು ಚರ್ಚೆ ನಡೆದಿದೆ. ಇದಕ್ಕೆ ಕಾರಣವಾಗಿರುವುದು ಕೋವಿಡ್ ಅಂಕಿಸಂಖ್ಯೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಜುಲೈನಲ್ಲಿ ಭಾರತದಲ್ಲಿ 1,241 ಕೋವಿಡ್ ಸಾವುಗಳುಂಟಾಗಿದ್ದು, ಮತ್ತು ಒಟ್ಟಾರೆ 5.67 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ.
ಭಾರತದ ಕೋವಿಡ್-19 ವ್ಯಾಕ್ಸಿನೇಷನ್ ಕವರೇಜ್ 205 ಕೋಟಿ ಡೋಸ್‌ಗಳನ್ನು ಮೀರಿದ್ದರೂ, ಮಾಸಿಕ ಪ್ರಕರಣಗಳು ಮತ್ತು ಸಾವುಗಳ ಗ್ರಾಫ್ ಮೇಲ್ಮುಖ ಪ್ರವೃತ್ತಿಯನ್ನು ಹೊಂದಿದೆ.
ಜುಲೈನಲ್ಲಿ ವರದಿಯಾದ ಒಟ್ಟು ಪ್ರಕರಣಗಳು ಮಾರ್ಚ್ ಮತ್ತು ಜೂನ್ ನಡುವೆ ಒಟ್ಟಾರೆಯಾಗಿ ವರದಿಯಾದ ಪ್ರಕರಣಗಳಿಗಿಂತ ಹೆಚ್ಚು ಎಂಬುದು ಗಮನಾರ್ಹ ಸಂಗತಿ.