![Jugalbandi Movie: ಭವಿಷ್ಯದ ನಿರ್ದೇಶಕರಿಗೆ 'ಜುಗಲ್ ಬಂದಿ' ಅರ್ಪಣೆ; ಅಸಿಸ್ಟೆಂಟ್ ಡೈರೆಕ್ಟರ್‌ಗಳಿಗೆ ಸ್ಪೆಷಲ್ ಶೋ - Vistara News](https://vistaranews.com/wp-content/uploads/2024/02/jugalbandi.webp)
ಸ್ಯಾಂಡಲ್ ವುಡ್ ನಲ್ಲಿ ಇಂದು ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಿದ್ದು. ದಿವಾಕರ್ ಡಿಂಡಿಮ ರಚಿಸಿ ನಿರ್ದೇಶಿಸಿರುವ ‘ಜುಗಲ್ ಬಂದಿ’ ಕೂಡ ತೆರೆ ಮೇಲೆ ಬಂದಿದೆ. ಜುಗಲ್ ಬಂದಿ ಕಥೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದು, ರಾಜ್ಯದೆಲ್ಲೆಡೆ ಈ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಧಾರಿತ ಈ ಚಿತ್ರದಲ್ಲಿ ಮಾನಸಿ ಸುಧೀರ್ ಸೇರಿದಂತೆ ಯಶ್ ಶೆಟ್ಟಿ, ಸಂತೋಷ್ ಆಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನ ಕೊಟ್ಟಿಗೆ, ಪ್ರಕಾಶ್ ಬೆಳಗಲ್, ಚಂದ್ರ ಪ್ರಭ, ರಂಜನ್, ಅರವಿಂದ್ ರಾವ್, ಅನಂತ್ ವೇಳು ಬಣ್ಣ ಹಚ್ಚಿದ್ದಾರೆ. ನಿರ್ದೇಶಕ ದಿವಾಕರ್ ಡಿಂಡಿಮ ತಮ್ಮ ಡಿಂಡಿಮ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಪ್ರಸಾದ್ ಹೆಚ್ ಎಂ ಸಂಕಲನ, ಪ್ರದ್ಯೋತ್ತನ್ ಸಂಗೀತ ಸಂಯೋಜನೆ ನೀಡಿದ್ದಾರೆ.