ವಿವಾದಗಳನ್ನು ಇತ್ಯರ್ಥ ಮಾಡುವುದಾಗಿ ಪ್ರಮಾಣ ಮಾಡಿಕೊಂಡು ನ್ಯಾಯಾಧೀಶರು ತಮ್ಮ ಹುದ್ದೆಗಳಿಗೆ ಬಂದಿರುತ್ತಾರೆಯೇ ಹೊರತು ಮುಂದೂಡುತ್ತಾ ಕೂರಲು ಅಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಸೆಕ್ಯೂರಿಟೀಸ್ ಅಪಿಲೇಟ್ ನ್ಯಾಯಾಧಿಕರಣದ ತೀರ್ಪೊಂದರ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯೊಂದರ ಆಲಿಕೆ ನಡೆಸಿದ ಡಿವೈ ಚಂದ್ರಚೂಡ್ ಹಾಗೂ ಎಂ.ಆರ್. ಶಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು, ಕೇಸಿನ ಪಾರ್ಟಿಯೊಬ್ಬರ ಪರ ವಕೀಲ ಪ್ರಕರಣದಲ್ಲಿ ಆಲಿಕೆಯನ್ನು ಎರಡು ವಾರಗಳ ಮಟ್ಟಿಗೆ ಮುಂದೂಡಬೇಕೆಂದು ಕೋರಿದಾಗ ಹೀಗೆ ಕಿವಿ ಹಿಂಡಿದೆ.
ಶಾಲಾ ಶುಲ್ಕ ಪಾವತಿ ಮಾಡದಿದ್ದ ಕಾರಣಕ್ಕೆ ಪ್ರಿನ್ಸಿಪಾಲರಿಂದ ಅವಮಾನಿತಳಾದ ಬಾಲಕಿ ನಿಗೂಢ ಸಾವು
“ನಾವು ಪ್ರಕರಣಗಳನ್ನು ಇತ್ಯರ್ಥ ಮಾಡುವ ಕರ್ತವ್ಯಕ್ಕೆ ಪ್ರಮಾಣವಚನ ಮಾಡಿ ಬಂದಿರುತ್ತೇವೆಯೇ ಹೊರತು ಅವುಗಳನ್ನು ಮುಂದೂಡಲಲ್ಲ. ಮುಂದಿನ ದಿನಕ್ಕಾಗಿ ಕೇಸುಗಳ ಬಗ್ಗೆ ಓದುತ್ತಾ ಕುಳಿತು ಮಧ್ಯರಾತ್ರಿಗಳನ್ನು ಕಳೆಯುತ್ತೇವೆ. ಈ ರೀತಿ ಪ್ರಕರಣಗಳನ್ನು ಮುಂದೂಡಬಾರದು” ಎಂದು ಪೀಠ ತಿಳಿಸಿದೆ.
ವಿನಾಕಾರಣ ಪ್ರಕರಣದ ಆಲಿಕೆಯನ್ನು ಮುಂದೂಡುತ್ತಾ ಹೋಗಲು ನೋಡುವ ಮನವಿಗಳನ್ನು ತಾನು ಪ್ರೋತ್ಸಾಹಿಸುವುದಿಲ್ಲವೆಂದ ಪೀಠ, ಈ ಮನವಿಯನ್ನೂ ಸಹ ತಿರಸ್ಕರಿಸುತ್ತಿರುವುದಾಗಿ ತಿಳಿಸಿದೆ.