ಯಾವಾಗಂದರೆ ಆವಾಗ ವೈಯಕ್ತಿಕವಾಗಿ ಕೋರ್ಟ್ ಮುಂದೆ ಹಾಜರಿರಲು ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್ ಕೊಡುವ ಪರಿಪಾಠವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿಕೊಳ್ಳಲು ನ್ಯಾಯಾಧೀಶರಿಗೆ ಸೂಚಿಸಿರುವ ಸುಪ್ರೀಂ ಕೋರ್ಟ್, ದೊರೆಗಳಂತೆ ವರ್ತಿಸದಿರಲು ತಿಳಿಸಿದೆ.
ಈ ರೀತಿ ಮಾಡುವುದರಿಂದ ನ್ಯಾಯಾಂಗ ಹಾಗೂ ಕಾರ್ಯಾಂಗಗಳ ನಡುವಿನ ಅಧಿಕಾರದ ಪ್ರತ್ಯೇಕತೆಗೆ ಅಗೌರವ ಸಲ್ಲಿಸಿದಂತೆ ಆಗುತ್ತದೆ ಎಂದ ನ್ಯಾಯಾಧೀಶರಾದ ಸಂಜಯ್ ಕಿಶನ್ ಕೌಲ್ ಹಾಗೂ ಹೇಮಂತ್ ಗುಪ್ತಾ ನೇತೃತ್ವದ ಪೀಠ, ಕೋರ್ಟ್‌ನ ಇಚ್ಛೆಯಂತೆ ಸರ್ಕಾರಿ ಅಧಿಕಾರಿಗಳ ಮೇಲೆ ಆದೇಶಗಳನ್ನು ಹೊರಡಿಸಿ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒತ್ತಡ ಹೇರುವುದನ್ನು ಪ್ರಶ್ನಿಸಿದೆ.
ಗಂಡು ಮಗುವಿಗೆ ಜನ್ಮ ನೀಡಿದ ಹರ್ಭಜನ್ ಪತ್ನಿ
“ಕಾರ್ಯಾಂಗದ ಭಾಗವಾದ ಸರ್ಕಾರಿ ಅಧಿಕಾರಿಗಳು ಸಹ ಸರ್ಕಾರದ ಮೂರನೇ ಅಂಗದಂತೆ ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳ ನಡೆಗಳು ಹಾಗೂ ನಿರ್ಧಾರಗಳು ಅವರ ಲಾಭಗಳಿಗಲ್ಲದೇ, ಆಡಳಿತ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ನಿಧಿಯ ಹೊಣೆಗಾರಿಕೆಯಿಂದಾಗಿರುತ್ತದೆ, ಕೆಲವೊಮ್ಮೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ, ನ್ಯಾಯಾಂಗ ಪರಿಶೀಲನೆಗೆ ಅರ್ಹವಲ್ಲದ ನಿರ್ಧಾರಗಳನ್ನು ಹೈಕೋರ್ಟ್ ಪಕ್ಕಕ್ಕಿಡಬೇಕು” ಎಂದು ಪೀಠ ತಿಳಿಸಿದೆ.