ಬೆಂಗಳೂರು: ಬ್ಯಾಕ್ ಲಾಗ್ ಹುದ್ದೆ ಸೇರಿ ಖಾಲಿ ಇರುವ 57 ಸಿವಿಲ್ ನ್ಯಾಯಾಧೀಶರ ಹುದ್ದೆಗಳ ನೇರ ನೇಮಕಾತಿಗೆ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.
ಏಪ್ರಿಲ್ 10 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕರ್ನಾಟಕ ನ್ಯಾಯಿಕ ಸೇವಾ ನೇಮಕಾತಿ ನಿಯಮ 2004, 2011, 2015, 2016ರ ತಿದ್ದುಪಡಿ ನಿಯಮಗಳ ಅಡಿ ನೇಮಕಾತಿ ಮಾಡಿಕೊಳ್ಳಲಾಗುವುದು. ನೋಂದಾಯಿತ ವಿಶ್ವವಿದ್ಯಾಲಯಗಳಿಂದ ಕಾನೂನು ಪದವಿ ಪಡೆದು ವಕೀಲರಾಗಿ ನೋಂದಣಿ ಮಾಡಿಸಿರಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಿಗೆ 38 ವರ್ಷ, ಇತರೆಯವರಿಗೆ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಹೈಕೋರ್ಟ್ ನಡೆಸುವ ಲಿಖಿತ ಮತ್ತು ಮೌಖಿಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದು ಒಟ್ಟು ಅಂಕಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. 27,700 ರೂ.ನಿಂದ 44,770 ರೂ. ವರೆಗೆ ವೇತನ ಶ್ರೇಣಿ ಇರಲಿದೆ ಎಂದು ಹೇಳಲಾಗಿದೆ.