ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್.ಟಿ.ಆರ್. ತಮ್ಮ ತಾಯಿಯ ತವರು ಕುಂದಾಪುರಕ್ಕೆ ಆಗಮಿಸಿದ್ದಾರೆ.
ಜೂನಿಯರ್ ಎನ್.ಟಿ.ಆರ್. ಅವರ ತಾಯಿ ಶಾಲಿನಿ ಕುಂದಾಪುರದವರು. ಜೂನಿಯರ್ ಎನ್.ಟಿ.ಆರ್. ಅವರಿಗೆ ಕುಂದಾಪುರವೆಂದರೆ ಅಚ್ಚುಮೆಚ್ಚು. ತಾಯಿಯಿಂದ ಕನ್ನಡ ಕಲಿತಿರುವ ಜೂನಿಯರ್ ಎನ್.ಟಿ.ಆರ್. ಸುಲಭವಾಗಿ ಕನ್ನಡ ಮಾತನಾಡಬಲ್ಲರು.
ಅವರ ತಾಯಿಗೆ ಕುಂದಾಪುರಕ್ಕೆ ಹೋಗಬೇಕು, ಉಡುಪಿ ಶ್ರೀ ಕೃಷ್ಣನ ದರ್ಶನ ಮಾಡಬೇಕೆಂಬ ಆಸೆ ಇದ್ದು, ಇದೇ ಕಾರಣಕ್ಕೆ ತಾಯಿಯನ್ನು ಕರೆದುಕೊಂಡು ಕುಂದಾಪುರಕ್ಕೆ ಬಂದಿದ್ದಾರೆ.
ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಸ್ವಾಗತಿಸಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಜೊತೆಗಿದ್ದರು. ಜೂನಿಯರ್ ಎನ್.ಟಿ.ಆರ್. ಕುಟುಂಬ, ನಟ ರಿಷಬ್ ಶೆಟ್ಟಿ ಕುಟುಂಬ, ನಿರ್ದೇಶಕ ಪ್ರಶಾಂತ್ ನಿಲ್ ಸೇರಿದಂತೆ ಇತರರು ಉಡುಪಿಯ ಕೃಷ್ಣನ ದರ್ಶನ ಮಾಡಿ ಬಾಳೆ ಎಲೆಯಲ್ಲಿ ಊಟ ಮಾಡಿದ್ದಾರೆ.