
ತಮ್ಮ ದೇಣಿಗೆಯು ಪ್ರವಾಹ ಸಂತ್ರಸ್ತರ ಚೇತರಿಕೆಗೆ ಒಂದು ಸಣ್ಣ ಹೆಜ್ಜೆ ಎಂದು ಜೂ.ಎನ್ಟಿಆರ್ ಹೇಳಿದ್ದಾರೆ. ಆಂಧ್ರಪ್ರದೇಶದ ಪ್ರವಾಹದಿಂದ ಸಂತ್ರಸ್ತರಾಗಿರುವ ಜನರ ದುಃಸ್ಥಿತಿ ಕಂಡು ಸ್ಟಾರ್ ನಟ ಮರುಗಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಅವರು ಟ್ವೀಟ್ ಮಾಡಿದ್ದಾರೆ.
ನಟ ಮಹೇಶ್ ಬಾಬು ಕೂಡ ಆಂಧ್ರಪ್ರದೇಶ ಪ್ರವಾಹದಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ವಿನಾಶಕಾರಿ ಪ್ರವಾಹದಿಂದ ಆಂಧ್ರಪ್ರದೇಶ ನಲುಗಿದೆ. ಸಿಎಂ ಪರಿಹಾರ ನಿಧಿಗೆ ತಲಾ 25 ಲಕ್ಷ ರೂ. ನೀಡಿದ್ದಾಗಿ ಅವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ಬಿಕ್ಕಟ್ಟಿನ ಸಮಯದಲ್ಲಿ ಎಲ್ಲರೂ ಮುಂದೆ ಬಂದು ಆಂಧ್ರಪ್ರದೇಶಕ್ಕೆ ಸಹಾಯ ಮಾಡಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಪ್ರವಾಹದಲ್ಲಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದು, ಪರಿಸ್ಥಿತಿ ಇನ್ನೂ ಅತಂತ್ರವಾಗಿದೆ.