alex Certify BIG NEWS: ಕೊನೆ ಕ್ಷಣದಲ್ಲಿ ಕುತೂಹಲ ಮೂಡಿಸಿದ BSY ನಡೆ, ನಾಯಕತ್ವ ಪ್ರಹಸನಕ್ಕೆ ತೆರೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊನೆ ಕ್ಷಣದಲ್ಲಿ ಕುತೂಹಲ ಮೂಡಿಸಿದ BSY ನಡೆ, ನಾಯಕತ್ವ ಪ್ರಹಸನಕ್ಕೆ ತೆರೆ…?

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಸಂಜೆ ವೇಳೆಗೆ ಸ್ಪಷ್ಟ ಸಂದೇಶ ಬರಲಿದೆ ಎಂದು ಹೇಳಲಾಗಿತ್ತು. ನಾಳೆ ಮಧ್ಯಾಹ್ನದವರೆಗೆ ಮಾತ್ರ ಮುಖ್ಯಮಂತ್ರಿಯವರ ಕಾರ್ಯಕ್ರಮಗಳ ನಿಗದಿಯಾಗಿದ್ದು, ಮಧ್ಯಾಹ್ನದ ನಂತರದ ಸಮಯವನ್ನು ಕಾಯ್ದಿರಿಸಲಾಗಿದ್ದರಿಂದ ಈ ಕುರಿತಾದ ಕುತೂಹಲ ಕೂಡ ಹೆಚ್ಚಾಗಿತ್ತು.

ಪ್ರತಿದಿನ ಸಿಎಂ ಕಾರ್ಯಕ್ರಮದ ಪಟ್ಟಿ ಪ್ರಕಟವಾಗಲಿದೆ. ಅನಿವಾರ್ಯ ಪರಿಸ್ಥತಿ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಆಯಾ ದಿನದ ಸಂಪೂರ್ಣ ಕಾರ್ಯಕ್ರಮ ಪಟ್ಟಿ ಪ್ರಕಟವಾಗುತ್ತದೆ. ಅಂತೆಯೇ, ನಾಳೆ ಮಧ್ಯಾಹ್ನದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

ಮಧ್ಯಪ್ರದೇಶದಲ್ಲಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೂಡ ಇಂದು ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಹೈಕಮಾಂಡ್ ಸೂಚನೆಗೆ ಮೇರೆಗೆ ಅವರು ಬೆಂಗಳೂರಿಗೆ ಆಗಮಿಸಲಿದ್ದು, ನಾಳೆ ಮಧ್ಯಾಹ್ನದ ಬಳಿಕ ಯಡಿಯೂರಪ್ಪ ರಾಜೀನಾಮೆ ನೀಡಬಹುದು ಎನ್ನಲಾಗಿತ್ತು.

ಆದರೆ, ನಾಳೆ ಮಧ್ಯಾಹ್ನದ ನಂತರದ ಸಮಯವನ್ನು ಕಾಯ್ದಿರಿಸಿದ್ದ ಸಿಎಂ ರಾಜೀನಾಮೆ ನೀಡಲ್ಲ. ನಾಳೆ ಮಧ್ಯಾಹ್ನದ ನಂತರ ಅವರು ಉತ್ತರ ಕನ್ನಡ ಜಿಲ್ಲೆ ಪ್ರವಾಸಕ್ಕೆ ತೆರಳಲಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪ ಅವರು, ಕಾರವಾರ ಜಿಲ್ಲೆಯಲ್ಲಿ ಮಳೆಯಿಂದ ಭಾರಿ ಹಾನಿಯಾಗಿದೆ. ನಾಳೆ ಕಾರವಾರ ಜಿಲ್ಲೆಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಅವರು ರಾಜೀನಾಮೆ ನೀಡುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡ ಯಡಿಯೂರಪ್ಪ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇವೆಲ್ಲವೂಗಳನ್ನು ಗಮನಿಸಿದರೆ ಸದ್ಯಕ್ಕೆ ನಾಯಕತ್ವ ಬದಲಾವಣೆ ಕುರಿತಾದ ಪ್ರಹಸನಗಳಿಗೆ ಬ್ರೇಕ್ ಬಿದ್ದಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿನ ಪ್ರಸ್ತುತ ಸ್ಥಿತಿ ಗತಿಗಳನ್ನಾಧರಿಸಿ ನಾಯಕತ್ವ ಬದಲಾವಣೆ ಮಾಡದಿರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದಂತಿದೆ. ಆದರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನಪ್ರಿಯ ನಾಯಕರಾಗಿದ್ದು, ಪಕ್ಷ ಅವರಿಗೆ ಬಹಳಷ್ಟು ಅವಕಾಶಗಳನ್ನು ನೀಡಿದೆ ಎಂದು ನೀಡಿದ ಹೇಳಿಕೆ ಗಮನಿಸಿದಾಗ ನಾಯಕತ್ವ ಬದಲಾವಣೆ ನಿಶ್ಚಿತವೆಂಬ ಚರ್ಚೆಗಳು ಕೂಡ ನಡೆದಿವೆ. ವರಿಷ್ಠರಿಂದ ರಾಜೀನಾಮೆ ಸಂದೇಶದ ಸೂಚನೆ ಇದ್ದರೂ, ನಾಳೆ ಸಿಎಂ ಕಾರವಾರಕ್ಕೆ ತೆರಳುತ್ತಿದ್ದು, ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...