ಹೊಸ ನಿಯಮವನ್ನು ಜಾರಿಗೆ ತಂದಿರುವ ಸುಪ್ರೀಂ ಕೋರ್ಟ್ ಈ ನಿಯಮದ ಪ್ರಕಾರ ಕೋರ್ಟ್ ರೂಮ್ನ ಒಳಗಡೆಯಲ್ಲಿ ನಡೆಯುವ ವಾದ – ವಿವಾದಗಳನ್ನು ಆಲಿಸಲು ಪತ್ರಕರ್ತರಿಗೂ ಅವಕಾಶ ನೀಡಿದೆ. ಕೋರ್ಟ್ ರೂಮಿನ ಒಳಗೆ ಪ್ರವೇಶಿಸುವ ಪತ್ರಕರ್ತರು ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿರಲಿದೆ ಎಂದು ಹೇಳಿದೆ.
ಇಂದಿನಿಂದ ಸುಪ್ರೀಂಕೋರ್ಟ್ನಲ್ಲಿ ಭೌತಿಕವಾಗಿ ವಿಚಾರಣೆಗಳು ನಡೆಯಲಿದ್ದು, ಈ ವಿಚಾರಣೆಗೆ ಮಾಧ್ಯಮ ಪ್ರತಿನಿಧಿಗಳಿಗೂ ಹಾಜರಾಗಲು ಅವಕಾಶ ನೀಡಲಾಗಿದೆ. ಆದರೆ ಪತ್ರಕರ್ತರು ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಸೇರಿದಂತೆ ವಿವಿಧ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿರಲಿದೆ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಕೊರೊನಾ ಸಾಂಕ್ರಾಮಿಕ ದೇಶದಲ್ಲಿ ಕಾಣಿಸಿಕೊಂಡ ಬಳಿಕ ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಸುಪ್ರೀಂ ಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆ ನಡೆಸುತ್ತಿದೆ. ಇದೀಗ ಮತ್ತೆ ಸುಪ್ರೀಂ ಕೋರ್ಟ್ನಲ್ಲಿ ಭೌತಿಕ ವಿಚಾರಣೆ ಆರಂಭವಾದಂತಾಗಿದೆ.