ಮಿರ್ಜಾಪುರದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವಾದ ರೋಟಿಯನ್ನು ಉಪ್ಪಿನೊಂದಿಗೆ ತಿನ್ನುತ್ತಿದ್ದುದನ್ನು ಚಿತ್ರೀಕರಿಸಿದ್ದಕ್ಕಾಗಿ ಸಂಚು ರೂಪಿಸಿದ ಆರೋಪ ಹೊತ್ತಿದ್ದ ಉತ್ತರ ಪ್ರದೇಶದ ಪತ್ರಕರ್ತ ಪವನ್ ಜೈಸ್ವಾಲ್ ಕ್ಯಾನ್ಸರ್‌ನಿಂದ ಮೃತರಾಗಿದ್ದಾರೆ.
ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆತ ಚಿಕಿತ್ಸೆಗಾಗಿ ಹಣ ಪಾವತಿಸಲು ಹೆಣಗಾಡುತ್ತಿದ್ದರು. ಹಣ ಹೊಂದಿಸಲು ಕ್ರೌಡ್ ಫಂಡಿಂಗ್ ಕೂಡ ಮಾಡಲಾಗಿತ್ತು.
ಮಿರ್ಜಾಪುರದ ಜಮಾಲ್‌ಪುರ ಬ್ಲಾಕ್‌ನಲ್ಲಿರುವ ಸಿಯುರ್ ಪ್ರಾಥಮಿಕ ಶಾಲೆಯ ಚಿಕ್ಕ ಮಕ್ಕಳು ಶಾಲೆಯ ಕಾರಿಡಾರ್‌ನ ನೆಲದ ಮೇಲೆ ಕುಳಿತು ರೋಟಿ ತಿನ್ನುವುದನ್ನು ಆತ ಚಿತ್ರೀಕರಿಸಿದ್ದರು.
BIG NEWS: PSI ನೇಮಕಾತಿ ಅಕ್ರಮ; ಸಹೋದರರಿಬ್ಬರೂ ಅಕ್ರಮದಲ್ಲಿ ಭಾಗಿ; ಅಣ್ಣ-ತಮ್ಮನ ವಿರುದ್ಧ FIR ದಾಖಲು
ಇದನ್ನು ಗಮನಿಸಿದ ಜಿಲ್ಲಾಡಳಿತವು ಅವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದು, ಶಾಲೆಯ ಪ್ರಭಾರ ಶಿಕ್ಷಕ ಹಾಗೂ ಗ್ರಾಮ ಪಂಚಾಯಿತಿಯ ಮೇಲ್ವಿಚಾರಕರನ್ನು ತಕ್ಷಣ ಅಮಾನತುಗೊಳಿಸಿತ್ತು. ಹಾಗೆಯೇ ಉತ್ತರ ಪ್ರದೇಶ ಸರ್ಕಾರವನ್ನು ದೂಷಿಸಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿ ಶಿಕ್ಷಣ ಇಲಾಖೆಯಿಂದ ದೂರು ಸಲ್ಲಿಕೆಯಾಗಿತ್ತು.
ಶಾಲೆಯಲ್ಲಿ ಮಧ್ಯಾಹ್ನದ ಊಟದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ನನಗೆ ಹಲವು ಬಾರಿ ಮಾಹಿತಿ ಬಂದಿತ್ತು. ಕೆಲವೊಮ್ಮೆ ಮಕ್ಕಳಿಗೆ ಉಪ್ಪು, ರೋಟಿ, ಕೆಲವೊಮ್ಮೆ ಉಪ್ಪು, ಅನ್ನ ನೀಡಲಾಗುತ್ತಿದೆ. ಅದನ್ನು ನಾನು ವಿಡಿಯೋ ಚಿತ್ರೀಕರಣ ಮಾಡಿದ್ದೆ ಎಂದು ಆತ ಹೇಳಿಕೊಂಡಿದ್ದರು. ಬಳಿಕ ಪತ್ರಕರ್ತಗೆ ಸರ್ಕಾರ ಕ್ಲೀನ್ ಚಿಟ್ ನೀಡಿತ್ತು.