ನವದೆಹಲಿ : ಕ್ರಿಕೆಟ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲ ಭಾಗಿಯಾದ ಆರೋಪದ ಮೇಲೆ ಸುದ್ದಿ ಬಿತ್ತರಿಸುವ ಮೂಲಕ ತನ್ನ ವರ್ಚಸ್ಸಿಗೆ ಹಾನಿ ಮಾಡಲಾಗಿದೆ ಎಂದು ನಟಿ ರಮ್ಯಾ ಅವರು ಕನ್ನಡದ ಏಷ್ಯಾನೆಟ್ ಸುವರ್ಣ ಸುದ್ದಿ ವಾಹಿನಿ ಹಾಗೂ ಅದರ ಮಾಜಿ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ದಾಖಲಿಸಿದ್ದ ಮಾನಹಾನಿ ಪ್ರಕರಣ ರದ್ದುಪಡಿಸಿಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಏಷ್ಯಾನೆಟ್ ನ್ಯೂಸ್ ನೆಟ್ ವರ್ಕ್ ಹಾಗೂ ಹಿರಿಯ ಪತ್ರಕರ್ತ ವಿಶ್ವೇಶ್ವರ್ ಭಟ್ ವಿರುದ್ಧ ನಟಿ ರಮ್ಯಾ ದಾಖಲಿಸಿದ್ದಂತ ಮಾನನಷ್ಟ ಮೊಕದ್ದಮೆ ಕೇಸ್ ರದ್ದುಪಡಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಕ್ರಿಕೆಟ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ನಲ್ಲಿ ನಟಿ ರಮ್ಯಾ ಪಾತ್ರವಿದೆ ಎಂದು ಏಷ್ಯಾನೆಟ್ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು.ಈ ಹಿನ್ನೆಲೆ ವಿಶ್ವೇಶ್ವರ್ ಭಟ್ ವಿರುದ್ಧ ನಟಿ ರಮ್ಯಾ ಮಾನನಷ್ಟ ಪ್ರಕರಣ ದಾಖಲಿಸಿದ್ದರು.
ಸುದ್ದಿ ಬಿತ್ತರಿಸುವಾಗ ವಿನಾಕಾರಣ ತನ್ನ ಹೆಸರನ್ನು ಬಳಸಿಕೊಂಡು ನನ್ನ ಗೌರವಕ್ಕೆ ಚ್ಯುತಿ ತರಲಾಗಿದೆ ಎಂದು ರಮ್ಯಾ ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಬೆಟ್ಟಿಂಗ್ ಆರೋಪದಲ್ಲಿ ರಮ್ಯಾ ಹೆಸರನ್ನು ಪದೇ ಪದೇ ಬಳಸಲಾಗಿದೆ. ಅರ್ಜಿದಾರರು ಬೆಟ್ಟಿಂಗ್ ಹಗರಣದಲ್ಲಿ ಆಕೆಯ ಪಾತ್ರ ಸಾಬೀತು ಮಾಡುವಂತಹ ಸಾಕ್ಷಿ ಸಲ್ಲಿಸಲ್ಲು ವಿಫಲರಾಗಿದ್ದಾರೆ ಎಂದು ತಿಳಿಸಿದೆ. ಆದ್ದರಿಂದ ರಮ್ಯಾ ದಾಖಲಿಸಿದ್ದಂತ ಮಾನನಷ್ಟ ಮೊಕದ್ದಮೆ ಕೇಸ್ ರದ್ದುಪಡಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ.