ನವದೆಹಲಿ: ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ದೆಹಲಿ ನ್ಯಾಯಾಲಯ ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಐದನೇ ಆರೋಪಿಗೆ ಈಗಾಗಲೇ ಜೈಲಿನಲ್ಲಿ ಅನುಭವಿಸಿದ ಅವಧಿಗೆ ಶಿಕ್ಷೆ ವಿಧಿಸಲಾಗಿದೆ.
ನಾಲ್ವರು ಅಪರಾಧಿಗಳ ಕೃತ್ಯವು ‘ಅಪರೂಪದ’ ವರ್ಗಕ್ಕೆ ಸೇರುವುದಿಲ್ಲ ಮತ್ತು ಆದ್ದರಿಂದ ಮರಣದಂಡನೆ ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಇಂಡಿಯಾ ಟುಡೇ ಸಮೂಹದ ಪತ್ರಕರ್ತೆ ವಿಶ್ವನಾಥನ್ ಅವರನ್ನು 2008ರ ಸೆಪ್ಟೆಂಬರ್ 30ರಂದು ದಕ್ಷಿಣ ದೆಹಲಿಯ ನೆಲ್ಸನ್ ಮಂಡೇಲಾ ಮಾರ್ಗದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಅಕ್ಟೋಬರ್ 18 ರಂದು ನ್ಯಾಯಾಲಯವು ರವಿ ಕಪೂರ್, ಅಮಿತ್ ಶುಕ್ಲಾ, ಅಜಯ್ ಕುಮಾರ್, ಬಲ್ಜೀತ್ ಮಲಿಕ್ ಮತ್ತು ಅಜಯ್ ಸೇಥಿ ಅವರನ್ನು ಕೊಲೆ ಮತ್ತು ಸಾಮಾನ್ಯ ಉದ್ದೇಶಕ್ಕಾಗಿ ತಪ್ಪಿತಸ್ಥರೆಂದು ಘೋಷಿಸಿತು.ಪತ್ರಕರ್ತೆಯಾಗಿದ್ದ ವಿಶ್ವನಾಥನ್ ಅವರನ್ನು 2008ರ ಸೆಪ್ಟೆಂಬರ್ ನಲ್ಲಿ ಕಚೇರಿಯಿಂದ ಮನೆಗೆ ತೆರಳುತ್ತಿದ್ದಾಗ ಕಾರಿನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣದ ಆರೋಪಿಗಳಾದ ರವಿ ಕಪೂರ್, ಅಮಿತ್ ಶುಕ್ಲಾ, ಅಜಯ್ ಕುಮಾರ್, ಬಲ್ಜೀತ್ ಮಲಿಕ್ ಮತ್ತು ಅಜಯ್ ಸೇಥಿ ಅವರನ್ನು ಸಾಕೇತ್ ನ್ಯಾಯಾಲಯ ದೋಷಿ ಎಂದು ಘೋಷಿಸಿ ತೀರ್ಪು ನೀಡಿತ್ತು. ಯುವ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಅವರು ಸೆಪ್ಟೆಂಬರ್ 30, 2008 ರಂದು ದಕ್ಷಿಣ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ತಮ್ಮ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು, ಆರಂಭದಲ್ಲಿ ಇದು ಕಾರು ಅಪಘಾತ ಎಂದು ಹೇಳಲಾಗಿತ್ತು.