ಜೋಶಿಮಠ ಕೇವಲ 12 ದಿನಗಳಲ್ಲಿ 5.4 ಸೆಂ.ಮೀ ಕುಸಿದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಬಿಡುಗಡೆ ಮಾಡಿದ ಉತ್ತರಾಖಂಡದ ಜೋಶಿಮಠದ ಉಪಗ್ರಹ ಚಿತ್ರಗಳು ತಿಳಿಸಿವೆ.
ಜನವರಿ 2 ರಂದು ಭಾರಿ ಕುಸಿತದ ನಂತರ ಹಿಮಾಲಯದ ಪಟ್ಟಣ ಜೋಶಿ ಮಠ ವು ಕೇವಲ 12 ದಿನಗಳಲ್ಲಿ 5.4 ಸೆಂ.ಮೀ ವೇಗದಲ್ಲಿ ಕುಸಿದಿದೆ ಎಂದು ಹೇಳಲಾಗಿದೆ.
ಬದರಿನಾಥ್, ಹೇಮಕುಂಡ್ ಸಾಹಿಬ್, ಅಂತರಾಷ್ಟ್ರೀಯ ಸ್ಕೀಯಿಂಗ್ ತಾಣವಾದ ಔಲಿಯಂತಹ ಪ್ರಸಿದ್ಧ ಯಾತ್ರಾ ಸ್ಥಳಗಳ ಹೆಬ್ಬಾಗಿಲು ಜೋಶಿಮಠ, ಭೂಮಿ ಕುಸಿತದಿಂದಾಗಿ ಸವಾಲನ್ನು ಎದುರಿಸುತ್ತಿದೆ.
ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್(ಎನ್‌ಆರ್‌ಎಸ್‌ಸಿ) ಯ ಪ್ರಾಥಮಿಕ ಅಧ್ಯಯನವು ಏಪ್ರಿಲ್ ಮತ್ತು ನವೆಂಬರ್ 2022 ರ ನಡುವೆ ಭೂಮಿಯ ಕುಸಿತವು ನಿಧಾನವಾಗಿತ್ತು, ಈ ಸಮಯದಲ್ಲಿ ಜೋಶಿಮಠವು 8.9 ಸೆಂ.ಮೀ. ಕುಸಿದಿದೆ.
ಆದರೆ, ಡಿಸೆಂಬರ್ 27, 2022 ಮತ್ತು ಜನವರಿ 8, 2023 ರ ನಡುವೆ, ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿದೆ ಮತ್ತು ಈ 12 ದಿನಗಳಲ್ಲಿ ಪಟ್ಟಣವು 5.4 ಸೆಂ.ಮೀ. ಮುಳುಗಡೆಯಾಗಿದೆ. ಕಾರ್ಟೊಸ್ಯಾಟ್-2ಎಸ್ ಉಪಗ್ರಹದಿಂದ ಚಿತ್ರಗಳನ್ನು ತೆಗೆಯಲಾಗಿದೆ.