
ಜೋಶ್ ಭಾರತದ ಅತ್ಯಂತ ಜನಪ್ರಿಯ ಕಿರು ವೀಡಿಯೊ ಮೇಕಿಂಗ್ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ, ಇದು ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ದೇಶಾದ್ಯಂತ ಹಲವಾರು ವೇದಿಕೆಯನ್ನು ನೀಡಿದೆ. ಲಿಪ್ ಸಿಂಕ್, ನಟನೆ, ಹಾಡುಗಾರಿಕೆ, ನೃತ್ಯ ಇತ್ಯಾದಿ ವಿವಿಧ ಪ್ರಕಾರಗಳಲ್ಲಿ ವೀಡಿಯೊಗಳನ್ನು ಮಾಡಲು ಅಪ್ಲಿಕೇಶನ್ ಅವಕಾಶವನ್ನು ನೀಡುತ್ತದೆ.
ಇದೀಗ ಜೋಶ್, ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ನಟನೆಯ ಮ್ಯಾಟ್ನಿ ಸಿನಿಮಾದ ಸಂಜೆ ವೇಳೆ ಹಾಡಿಗಾಗಿ ಕೈಜೋಡಿಸಿದ್ದು, ‘ಮ್ಯಾಟ್ನಿ’ ಚಿತ್ರದ ‘ಸಂಜೆ ಮೇಳ’ ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ಜೋಶ್ ಪ್ರಭಾವಿ ವ್ಯಕ್ತಿಗಳು ಸತೀಶ್ ನೀನಾಸಂ, ರಚಿತಾ ರಾಮ್ ಸೇರಿದಂತೆ ಕನ್ನಡದ ಹೆಸರಾಂತ ನಟರೊಂದಿಗೆ ಕೈಜೋಡಿಸಿದ್ದಾರೆ.
ಸದ್ಯ ಈ ಹಾಡಿಗೆ ಜೋಶ್ ನಲ್ಲಿ ಹಲವರು ಲಿಪ್ ಸಿಂಕ್ ಮಾಡಿ ತಮ್ಮ ವಿಡಿಯೋಗಳನ್ನು ಹರಿಬಿಡುತ್ತಿದ್ದು, ಸಾಕಷ್ಟು ವೈರಲ್ ಆಗುತ್ತಿವೆ. ಮನೋಹರ್ ಕಾಂಪಲ್ಲಿ ಅವರು ‘ಮ್ಯಾಟ್ನಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸತೀಶ್ ನೀನಾಸಂ, ರಚಿತಾ ರಾಮ್, ಅದಿತಿ ಪ್ರಭುದೇವ ಅವರ ಕಾಂಬಿನೇಷನ್ ಇರುವುದರಿಂದ ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

https://share.myjosh.in/video/68e15028-3d42-4627-b017-9f61ab607b4f?u=0x96fbe80c2f714a3b
https://share.myjosh.in/video/b3fe1b04-204a-4f75-b793-4bb88104dbf1?u=0xa877ded3701f91c9