
ಸಾಮಾನ್ಯವಾಗಿ ಮಕ್ಕಳು ದೊಡ್ಡವರಿಂದ ಎಲ್ಲವನ್ನೂ ಕಲಿಯುತ್ತಾರೆ. ಆದರೆ ಜೋರ್ಡಾನ್ನ 5 ವರ್ಷದ ಈ ಪೋರ ತನ್ನ ದೇಶದ ’ಅತಿ ಕಿರಿಯ ಆಂಗಿಕ ಭಾಷಾ ಶಿಕ್ಷಕ’ನಾಗುವ ಮೂಲಕ ಅಂತರ್ಜಾಲದಲ್ಲಿ ದೊಡ್ಡ ಸೆನ್ಸೇಷನ್ ಆಗಿದ್ದಾನೆ.
ಆಸ್ ಔದಾಹ್ ಎಂಬ ಈ ಬಾಲಕ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಆಂಗಿಕ ಭಾಷೆಯ ಪಾಠ ಹೇಳಿಕೊಡುತ್ತಿದ್ದು, ತನ್ನ ದೇಶದ ಹಾಗೂ ವಿದೇಶಗಳಲ್ಲೆಲ್ಲಾ ಸಂಚಲನ ಸೃಷ್ಟಿಸಿದ್ದಾನೆ. ತನ್ನ ಅಜ್ಜ-ಅಜ್ಜಿಗೆ ಕಿವಿ ಕೇಳಿಸದೇ ಇದ್ದ ಕಾರಣ, ಅವರೊಂದಿಗೆ ಸಂವಹನ ನಡೆಸಲು ಆಂಗಿಕ ಭಾಷೆ ಬಳಸುತ್ತಿದ್ದ ಔದಾಹ್ ಬರುಬರುತ್ತಾ ಈ ವಿಚಾರದಲ್ಲಿ ಪರಿಣಿತನಾಗಿಬಿಟ್ಟಿದ್ದಾನೆ.
ವರ ಗುಟ್ಕಾ ಹಾಕಿದ ಕಾರಣಕ್ಕೆ ಮುರಿದುಬಿತ್ತು ಮದುವೆ..!
ಇದೀಗ ಆತನ ಆಂಗಿಕ ಭಾಷೆಯನ್ನು ಆನ್ಲೈನ್ ಮೂಲಕ ಅಗತ್ಯವಿದ್ದವರಿಗೆ ಹೇಳಿ ಕಲಿಸಲು ಬಳಸುತ್ತಿದ್ದಾನೆ. ತನ್ನ ಚಾರ್ಮಿಂಗ್ ವಿಡಿಯೋಗಳ ಮೂಲಕ ಅದಾಗಲೇ ಸಾಕಷ್ಟು ಖ್ಯಾತಿ ಪಡೆದಿರುವ ಔದಾಹ್, ಬಹಳ ಕಿರು ಅವಧಿಯಲ್ಲೇ ಸಾಕಷ್ಟು ಹಿಂಬಾಲಕರನ್ನು ಪಡೆದುಕೊಂಡಿದ್ದಾನೆ.