ಕಲಬುರಗಿ: ಜೋಕಾಲಿ ಆಡುವ ವೇಳೆ ಹಗ್ಗ ಕುತ್ತಿಗೆಗೆ ಸುತ್ತಿಕೊಂಡು ಬಾಲಕಿ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಯಡ್ರಾಮಿ ನಾಗಲಿಂಗೇಶ್ವರ ಕಾಲೋನಿಯಲ್ಲಿ ನಡೆದಿದೆ.
ಬಸವರಾಜ ಅವರ ಪುತ್ರಿ ಸಹನಾ ಹೂಗಾರ(16) ಮೃತಪಟ್ಟ ಬಾಲಕಿ ಎಂದು ಹೇಳಲಾಗಿದೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದ ಸಹನಾ ರಕ್ಷಾಬಂಧನದ ದಿನ ತಮ್ಮನಿಗೆ ರಾಖಿ ಕಟ್ಟಬೇಕಿತ್ತು, ತಂದೆ, ತಾಯಿ ನಿತ್ಯದಂತೆ ಹೋಟೆಲ್ ಗೆ ತೆರಳಿದ ಸಂದರ್ಭದಲ್ಲಿ ಸಹನಾ ಜೋಕಾಲಿ ಆಡುವ ವೇಳೆ ಹಗ್ಗ ಕೊರಳಿಗೆ ಬಿಗಿದುಕೊಂಡು ಮೃತಪಟ್ಟಿದ್ದಾಳೆ.