ಮೈಸೂರು: ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗುವ ಅನಿವಾರ್ಯತೆ ನನಗೆ ಇಲ್ಲ. ನನ್ನ ತಂದೆ ಕೂಡ ಜನಸಂಘದಿಂದ ಬಂದವರು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಹೋಗಬೇಕು ಎನಿಸಿದ್ದರೆ ಚುನಾವಣೆ ವೇಳೆಯಲ್ಲಿಯೇ ಹೋಗುತ್ತಿದ್ದೆ. ಟಿಕೆಟ್ ಕೊಡುತ್ತೇವೆ ಬನ್ನಿ ಎಂದು ಸಾಕಷ್ಟು ಜನ ನನ್ನನ್ನು ಕರೆದರು. ಅಂತಹ ಸಮಯದಲ್ಲಿ ಹೋಗಲಿಲ್ಲ ಎಂದು ಹೇಳಿದ್ದಾರೆ.
ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡಿದವನು ನಾನು. ನನ್ನ ವಿರುದ್ಧ ಸಾಕಷ್ಟು ಕೇಸ್ ಹಾಕಿಸಿದರು. ಈಗಲೂ ಕೇಸ್ ಗಳು ಇವೆ. ನಾನು ಬದ್ಧತೆ ಇರುವ ವ್ಯಕ್ತಿ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ನಮ್ಮ ಪಕ್ಷದ ಕೆಲವರು ಬಕೆಟ್ ಹಿಡಿಯುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾತು ಸಭ್ಯತೆ ಮೀರಬಾರದು ಎಂದು ಸ್ವಪಕ್ಷ ನಾಯಕರ ವಿರುದ್ಧ ಅವರು ಕಿಡಿಕಾಡಿದ್ದಾರೆ.
ಪ್ರಿನ್ಸೆಸ್ ರಸ್ತೆ ಎನ್ನುವ ದಾಖಲೆ ಇದ್ದರೆ ಬದಲಾವಣೆ ಬೇಡ, ಸಿದ್ದರಾಮಯ್ಯ ಹೆಸರನ್ನು ಬೇರೆ ರಸ್ತೆಗೆ ಇಡಲಿ. ನಾನು ಕಾಂಗ್ರೆಸ್ ಶಾಸಕ ಹರೀಶ್ ಗೌಡ ಅವರಿಗೆ ಮನವಿ ಮಾಡುತ್ತೇನೆ. ಪ್ರಿನ್ಸಿಸ್ ರಸ್ತೆ ಎಂದು ಕರೆಯುವುದಕ್ಕೆ ದಾಖಲೆ ಇದ್ದರೆ ಬದಲಾವಣೆ ಬೇಡವೆಂದು ಹೇಳುತ್ತೇನೆ. ಹೊಸ ಬಡಾವಣೆ ಮಾಡಿ ಸಿದ್ದರಾಮಯ್ಯನವರ ಹೆಸರಿಡಲಿ. ಇದನ್ನು ಇಲ್ಲಿಗೆ ನಿಲ್ಲಿಸೋಣ ಎಂದು ಹೇಳಿದ್ದಾರೆ.