alex Certify ಸಿಂಗಲ್‌ ಡೋಸ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದ ಜಾನ್ಸನ್ & ಜಾನ್ಸನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಗಲ್‌ ಡೋಸ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ ಕೋರಿದ ಜಾನ್ಸನ್ & ಜಾನ್ಸನ್

ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಬೇಡಿಕೆ ಜೋರಾಗಿರುವ ಕಾರಣ ಫಾರ್ಮ ಕಂಪನಿಗಳು ಲಸಿಕೆ ಪೂರೈಸಲು ಪೈಪೋಟಿಗೆ ಬಂದಂತಿದೆ.

ಇದೀಗ ಸಿಂಗಲ್-ಬಳಕೆಯ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಗೆ ಅನುಮತಿ ಕೊಡಲು ಜಾನ್ಸನ್ & ಜಾನ್ಸನ್ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

BIG NEWS: ಖೇಲ್ ರತ್ನ ಪ್ರಶಸ್ತಿಗೆ ‘ಮೇಜರ್ ಧ್ಯಾನ್ ಚಂದ್ ಪ್ರಶಸ್ತಿ’ ಮರುನಾಮಕರಣ; ಪ್ರಧಾನಿ ಮೋದಿ ಘೋಷಣೆ

ಸದ್ಯದ ಮಟ್ಟಿಗೆ 20,49,220 ಲಸಿಕೆಗಳು ಉತ್ಪಾದನೆಯಲ್ಲಿವೆ ಎಂದು ಭಾರತ ಸರ್ಕಾರ ತಿಳಿಸಿದೆ. ಆಗಸ್ಟ್-ಡಿಸೆಂಬರ್‌‌ ಅವಧಿಯಲ್ಲಿ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್ ಸೇರಿ ಒಟ್ಟಾರೆ 136 ಕೋಟಿ ಲಸಿಕೆಗಳನ್ನು ಈ ವೇಳೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶದಲ್ಲಿ ಹೊಸದಾಗಿ 44,643 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದ 464 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ದತ್ತಾಂಶ ತಿಳಿಸುತ್ತಿದೆ. ಇದೇ ವೇಳೆ, ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣವು 97.36%ದಷ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...