ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಗೆ ಮತ್ತೆ COVID-19 ಪಾಸಿಟಿವ್ ಬಂದಿದ್ದು, ಅವರು ಐಸೋಲೇಷನ್ ನಲ್ಲಿದ್ದಾರೆ. ಆದರೆ, ಕೋವಿಡ್ ನ ಯಾವುದೇ ಲಕ್ಷಣಗಳಿಲ್ಲ.
ಆಂಟಿ ವೈರಲ್ ಔಷಧದ ಚಿಕಿತ್ಸೆಯ ನಂತರ ಮರುಕಳಿಸುವ ಅಪರೂಪದ ಪ್ರಕರಣದಲ್ಲಿ ಜೋ ಬಿಡೆನ್ ಗೆ ಮತ್ತೆ ಕೊರೊನಾ ವೈರಸ್ ಗೆ ಧನಾತ್ಮಕತೆ ಪರೀಕ್ಷಿಸಿದ್ದಾರೆ. ಅವರು ನೆಗೆಟಿವ್ ಪರೀಕ್ಷೆ ಮಾಡಿದ ಸುಮಾರು ಮೂರು ದಿನಗಳ ನಂತರ ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ನಂತರ ಪ್ರತ್ಯೇಕ ವಾಸದಲ್ಲಿದ್ದಾರೆ ಎಂದು ವೈಟ್ ಹೌಸ್ ದೃಢಪಡಿಸಿದೆ.
ಶ್ವೇತಭವನದ ವೈದ್ಯ ಡಾ. ಕೆವಿನ್ ಓ’ಕಾನ್ನರ್ ಅವರು, ಬಿಡೆನ್ ಗೆ ಯಾವುದೇ ರೋಗಲಕ್ಷಣಗಳು ಕಂಡು ಬಂದಿಲ್ಲ. ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಮಾರ್ಗಸೂಚಿಗಳ ಅನುಸಾರ ಬಿಡೆನ್ ಕನಿಷ್ಠ ಐದು ದಿನಗಳವರೆಗೆ ಪ್ರತ್ಯೇಕತೆಯಲ್ಲಿರುತ್ತಾರೆ. ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬರುವವರೆಗೆ ವೈಟ್ ಹೌಸ್ ನಲ್ಲಿ ಐಸೋಲಟ್ ಆಗಲಿದ್ದಾರೆ.
ಮುಂದಿನ ಎರಡು ದಿನಗಳವರೆಗೆ ಮನೆಯಿಂದ ಕೆಲಸ ಮಾಡಲಿದ್ದೇನೆ ಎಂದು ಬಿಡೆನ್ ವಿಡಿಯೋ ಸಂದೇಶ ಪೋಸ್ಟ್ ಮಾಡಿದ್ದಾರೆ.