ಅಧ್ಯಕ್ಷ ಜೋ ಬಿಡೆನ್ ಶುಕ್ರವಾರ ಉಕ್ರೇನ್ –ಪೋಲೆಂಡ್ ಗಡಿಯ ಬಳಿ ನೆಲೆಸಿರುವ ಯುಎಸ್ ಪಡೆಗಳನ್ನು ಭೇಟಿಯಾಗಿದ್ದಾರೆ.
ತಮ್ಮ ತಾಯ್ನಾಡಿನ ಮೇಲೆ ರಷ್ಯಾದ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಪೋಲೆಂಡ್ ಗೆ ಪಲಾಯನ ಮಾಡುತ್ತಿರುವ ಉಕ್ರೇನಿಯನ್ನರ ಜೊತೆಗೆ ಮಾತನಾಡಿದ್ದಾರೆ. ಪೋಲಿಷ್ ಪಡೆಗಳ ಜೊತೆಯಲ್ಲಿ ಸೇವೆ ಸಲ್ಲಿಸುತ್ತಿರುವ US ಸೇನೆಯ 82 ನೇ ವಾಯುಗಾಮಿ ವಿಭಾಗದ ಸದಸ್ಯರನ್ನು ಬೈಡೆನ್ ಭೇಟಿ ಮಾಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಆಗ್ನೇಯ ಪೋಲೆಂಡ್‌ನ ಅತಿದೊಡ್ಡ ನಗರವಾದ ರ್ಜೆಸ್ಜೋವ್‌ನಲ್ಲಿರುವ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬೈಡೆನ್, ಅಲ್ಲಿ ಕೆಲವು US ಪಡೆಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈ ಪ್ರದೇಶ ಉಕ್ರೇನಿಯನ್ ಗಡಿಯಿಂದ ಸುಮಾರು ಒಂದು ಗಂಟೆಯ ಅವಧಿ ದೂರದಲ್ಲಿದೆ.
ಅವರು ಶನಿವಾರ ವಾರ್ಸಾದಲ್ಲಿ ಪೋಲಿಷ್ ಅಧ್ಯಕ್ಷ ಆಂಡ್ರೆಜ್ ದುಡಾ ಮತ್ತು ಇತರರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಯುಎಸ್ ಕಾಂಗ್ರೆಸ್ ಈ ತಿಂಗಳು ಉಕ್ರೇನ್ ಗೆ ಮಾನವೀಯ ಮತ್ತು ಮಿಲಿಟರಿ ಸಹಾಯಕ್ಕಾಗಿ 13 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಮೊತ್ತ ನೀಡಲು ಅನುಮೋದಿಸಿದೆ.