alex Certify ಅಮೆರಿಕ ಸೇನೆ ಸ್ಥಳಾಂತರ ನಿರ್ಧಾರದಿಂದ ಉಳಿದಿದೆ ಅನೇಕರ ಜೀವ; ನಿರ್ಗಮನದ ಸಮಯ ಸಮರ್ಥಿಸಿಕೊಂಡ ಬೈಡೆನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಸೇನೆ ಸ್ಥಳಾಂತರ ನಿರ್ಧಾರದಿಂದ ಉಳಿದಿದೆ ಅನೇಕರ ಜೀವ; ನಿರ್ಗಮನದ ಸಮಯ ಸಮರ್ಥಿಸಿಕೊಂಡ ಬೈಡೆನ್

ಅಫ್ಘಾನ್ ನಿಂದ ಅಮೆರಿಕ ಸೇನೆ ನಿರ್ಗಮಿಸಿದ ಸಮಯವನ್ನು ಅಧ್ಯಕ್ಷ ಜೋ ಬೈಡೆನ್ ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಯುಎಸ್ ಅನೇಕರ ಜೀವಗಳನ್ನು ಉಳಿಸಿದೆ ಎಂದು ಅವರು ಹೇಳಿದ್ದಾರೆ.

ಅಧ್ಯಕ್ಷ ಜೋ ಬಿಡೆನ್ ಅವರು ಅಫ್ಘಾನಿಸ್ತಾನದಿಂದ ಯುಎಸ್ ನಿರ್ಗಮನವನ್ನು ಸಮರ್ಥಿಸಿಕೊಂಡಿದ್ದು, 1,00,000 ಕ್ಕಿಂತಲೂ ಹೆಚ್ಚು ಜನರನ್ನು ಸ್ಥಳಾಂತರ ಐತಿಹಾಸಿಕ ಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಫ್ಘನ್ ನಿಂದ ಸೇನೆ  ಹಿಂತೆಗೆದುಕೊಳ್ಳುವಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳುವ ಮೂಲಕ ಈ ಕುರಿತಾದ ಟೀಕೆಗಳನ್ನು ತಿರಸ್ಕರಿಸಿದ್ದಾರೆ.

ನಾವು ಈ ಶಾಶ್ವತ ಯುದ್ಧವನ್ನು ವಿಸ್ತರಿಸುವುದಿಲ್ಲ, ಶಾಶ್ವತವಾಗಿ ನಿರ್ಗಮನವನ್ನೂ ವಿಸ್ತರಿಸುತ್ತಿಲ್ಲ ಎಂದು ಅವರು ಹೇಳಿದ್ದು, ಯುದ್ಧವನ್ನು ಕೊನೆಗೊಳಿಸುವ ಸಮಯ ಇದು ಅಭಿಪ್ರಾಯಪಟ್ಟಿದ್ದಾರೆ.

ರಿಪಬ್ಲಿಕನ್ನರು ಆಗಸ್ಟ್ 31 ರ ನಂತರವೂ ಆಫ್ಘನ್ ನಲ್ಲಿ ಸೇನೆ ಕಾರ್ಯಾಚರಣೆ ಮುಂದುವರೆಸಬೇಕೆಂದು ಹೇಳಿದ್ದಾರೆ. ಆಗಸ್ಟ್ 31 ರೊಳಗೆ ಆಫ್ಘನ್ ನಿಂದ ಎಲ್ಲ ಅಮೆರಿಕನ್ನರನ್ನು ಸ್ಥಳಾಂತರಿಸಲು ಗಡುವು ನೀಡಿದ್ದು, ವಿದೇಶಾಂಗ ಇಲಾಖೆಯ ಪ್ರಕಾರ, ಸುಮಾರು 200 ಅಮೆರಿಕನ್ನರು ಅಫ್ಘಾನಿಸ್ತಾನದಲ್ಲಿ ಉಳಿದಿದ್ದಾರೆ ಎಂದು ತಿಳಿಸಿದ್ದಾರೆ.

ಅಮೆರಿಕನ್ ಜೀವಗಳನ್ನು ಉಳಿಸಲು ಗಡುವು ಪ್ರಮುಖವಾಗಿತ್ತು. ಅಮೆರಿಕ ಸೇನೆ ಅಲ್ಲೇ ಉಳಿದು ತಾಲಿಬಾನ್‌ ನೊಂದಿಗೆ ಯುದ್ಧ ಮುಂದುವರೆಸಿದ್ದರೆ ಹೆಚ್ಚುವರಿ ಸಾವುನೋವುಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಕಾಬೂಲ್ ವಿಮಾನ ನಿಲ್ದಾಣದಿಂದ ಯುಎಸ್ ನಡೆಸಿದ ಅತಿದೊಡ್ಡ ಏರ್ಲಿಫ್ಟ್ ಅಭೂತಪೂರ್ವ ಎಂದು ಬಣ್ಣಿಸಿದ ಅವರು, ಕಾರ್ಯಾಚರಣೆಯಲ್ಲಿ ಸುಮಾರು 6,000 ಅಮೆರಿಕನ್ನರು ಸೇರಿದಂತೆ 1,17,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಯಾವುದೇ ರಾಷ್ಟ್ರ ಇತಿಹಾಸದಲ್ಲಿಯೂ ಅಂತಹ ದೊಡ್ಡ ಕಾರ್ಯಾಚರಣೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಜೋ ಬೈಡೆನ್ ಅವರ ರಾಜಕೀಯ ವಿರೋಧಿಗಳು, ಸೇನೆ ವಾಪಸ್ ನಿರ್ಧಾರವನ್ನು ಟೀಕಿಸಿದ್ದಾರೆ, ಅಮೆರಿಕ ಜನರನ್ನು ಮೊದಲೇ ಸ್ಥಳಾಂರರ ಮಾಡಬೇಕಿತ್ತು. ಕಾಬೂಲ್‌ನಲ್ಲಿ ಹೆಚ್ಚು ಶಕ್ತಿಯುತವಾಗಿ ಕಾರ್ಯನಿರ್ವಹಿಸಬೇಕಿತ್ತು. ಅಧ್ಯಕ್ಷರು ನಿರ್ವಹಿಸಿದ ಕ್ರಮಗಳು ಸರಿಯಾಗಿಲ್ಲ ಎನ್ನಲಾಗಿದೆ.

ಈ ಅಮೆರಿಕನ್ ಸರ್ಕಾರದ ಅವಧಿಯಲ್ಲಿ ಮಿಲಿಟರಿಯಲ್ಲಿ ದೊಡ್ಡ ವೈಫಲ್ಯವೆಂದು ಭಾವಿಸುವ ಜವಾಬ್ದಾರಿ ಇರಬೇಕು ಎಂದು ಹೌಸ್ ಮೈನಾರಿಟಿ ಲೀಡರ್ ಕೆವಿನ್ ಮೆಕಾರ್ಥಿ ಹೇಳಿದರು.

ಅಮೆರಿಕ ಸೇನೆ ಸ್ಥಳಾಂತರದಿಂದ ಆಫ್ಘನ್ ಅಂತಾರಾಷ್ಟ್ರೀಯ ಭಯೋತ್ಪಾದನೆಗೆ ತಳಹದಿಯಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ. ಆದರೆ ಬಿಡೆನ್ ಅವರು, ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಫ್ಘನ್ ನಿಂದ ಹಿಂದೆ ಸರಿಯಲು ತಾಲಿಬಾನ್ ಜೊತೆ ಮಾಡಿಕೊಂಡ ಒಪ್ಪಂದಕ್ಕೆ ಬದ್ಧ ಎಂದು ವಿವರಿಸಿದ್ದಾರೆ.

ಕೆಲವರು ಡೊನಾಲ್ಡ್ ಟ್ರಂಪ್ ಮಾಡಿಕೊಂಡಿದ್ದ ಒಪ್ಪಂದವನ್ನು ಬಿಡೆನ್ ಕೈಬಿಡಬಹುದು ಅಥವಾ ಮರು ಮಾತುಕತೆ ನಡೆಸಬಹುದೆಂದು ಹೇಳಿದ್ದರೆ, ಟ್ರಂಪ್ ಮತ್ತು ಅವರ ಬೆಂಬಲಿಗರು ಒಪ್ಪಂದವನ್ನು ಷರತ್ತುಬದ್ಧವಾಗಿ ಮರುಪರಿಶೀಲಿಸಲು ಪ್ರಯತ್ನಿಸಿದದೆ, ಯಾವುದೇ ಪ್ರಮುಖ ಬದಲಾವಣೆ ಕೂಡ ಹೊಸ ಹಿಂಸೆಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ನಮಗೆ ಉಳಿದಿರುವ ಒಂದು ಸರಳ ನಿರ್ಧಾರವೆಂದರೆ ಹಿಂದಿನ ಒಪ್ಪಂದದ ಅನ್ವಯ ಬದ್ಧತೆ ಅನುಸರಿಸಿ ಅಫ್ಘಾನಿಸ್ತಾನವನ್ನು ತೊರೆಯುವುದು. ಅಥವಾ ಇನ್ನೂ 10 ಸಾವಿರ ಸೈನಿಕರನ್ನು ಕಳಿಸಿ ಯುದ್ಧಕ್ಕೆ ಸನ್ನದ್ಧರಾಗುವುದು. ಹೀಗೆ ಆಯ್ಕೆಯ ನಿರ್ಧಾರವೂ ಎದುರಿಗಿದೆ ಎನ್ನಲಾಗಿದೆ.

ಅಫ್ಘಾನಿಸ್ತಾನದಿಂದ ಯುಎಸ್ ಸೇನೆ ಹಿಂತೆಗೆದುಕೊಳ್ಳುವುದಾಗಿ ಬೈಡೆನ್ ತನ್ನ ಪ್ರಚಾರದ ಸಮಯದಲ್ಲಿ ಭರವಸೆ ನೀಡಿದ್ದರು, ಸ್ಥಳಾಂತರಿಸುವ ಪ್ರಯತ್ನಕ್ಕೆ ಮುಂಚಿತವಾಗಿ ನಡೆಸಲಾದ ಸಮೀಕ್ಷೆಯಲ್ಲಿ ಅಮೆರಿಕದ ಸಾರ್ವಜನಿಕರು ಬೆಂಬಲಿಸಿದ್ದರು. ರಿಪಬ್ಲಿಕನ್ನರು ವಾಪಸಾತಿಯ ನಿರ್ಧಾರ ಟೀಕಿಸಿದ್ದರೂ, ಟ್ರಂಪ್ ಅವರು ಇನ್ನೂ ವೇಗವಾಗಿ ಅಲ್ಲಿಂದ ಸ್ಥಳಾಂತರಕ್ಕೆ ಪ್ರಯತ್ನಿಸಿದರು, ಈ ವರ್ಷದ ಮೇ 1 ರೊಳಗೆ ದೇಶದಿಂದ ನಿರ್ಗಮಿಸಲು ತಾಲಿಬಾನ್ ಜೊತೆ ಒಪ್ಪಂದ ಮಾಡಿಕೊಂಡರು.

ಸೋಮವಾರ ಪ್ರಕಟಿಸಿದ ರಾಯಿಟರ್ಸ್/ಇಪ್ಸೊಸ್ ಸಮೀಕ್ಷೆಯು ಬೈಡೆನ್ ಸೇನೆ ಹಿಂತೆಗೆದುಕೊಳ್ಳುವಿಕೆಯ ನಿರ್ವಹಣೆಯನ್ನು ಶೇಕಡ 40 ಕ್ಕಿಂತ ಕಡಿಮೆ ಜನ ಅನುಮೋದಿಸಿದ್ದಾರೆ ಎಂದು ತಿಳಿಸಿದೆ. ಪ್ರತಿ ಅಮೆರಿಕನ್ ನಾಗರಿಕನನ್ನು ಸ್ಥಳಾಂತರಿಸುವವರೆಗೂ ಯುಎಸ್ ಪಡೆಗಳು ಇರಬೇಕೆಂದು ಮುಕ್ಕಾಲು ಪಾಲು ಅಮೆರಿಕನ್ನರು ಬಯಸಿದ್ದರು.

ಅಮೆರಿಕ ರಾಜಕಾರಣಿಗಳು ಮತ್ತು ಮಿಲಿಟರಿ ನಾಯಕರು ಹಲವು ವರ್ಷಗಳಿಂದ ಅಫ್ಘಾನಿಸ್ತಾನ ಸರ್ಕಾರ ಮತ್ತು ಸೇನೆಯನ್ನು ತಾಲಿಬಾನ್ ಸ್ವಾಧೀನದಲ್ಲಿರುವ ಬಗ್ಗೆ ಸಾಬೀತುಪಡಿಸಿದ್ದಕ್ಕಿಂತ ಹೆಚ್ಚು ಸ್ಥಿರ ಮತ್ತು ಸಮರ್ಥ ತೋರಿಸಿಕೊಟ್ಟಿದ್ದಾರೆ. ಅಮೆರಿಕ ಜನರೊಂದಿಗೆ ಪ್ರಾಮಾಣಿಕವಾಗಿರುವ ಸಮಯ ಇದು ಎಂದು ಬೈಡೆನ್ ಹೇಳಿದ್ದು, ನಾವು ಇನ್ನು ಮುಂದೆ ಅಫ್ಘಾನಿಸ್ತಾನದಲ್ಲಿ ಮುಕ್ತ ಕಾರ್ಯಾಚರಣೆ ನಡೆಸುವ ಯಾವ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...