ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡೆನ್ ಆರೋಗ್ಯ ರಕ್ಷಣಾ ತಂಡವನ್ನ ನಿರ್ಮಿಸಿದ ಬೆನ್ನಲ್ಲೇ ಕೊರೊನಾ ವೈರಸ್ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಕರೆ ನೀಡಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜೋ ಬಿಡೆನ್ ಅಮೆರಿಕನ್ನರಿಗೆ ಮೂರು ಮುಖ್ಯ ವಿಚಾರಗಳನ್ನ ಹೇಳಿದ್ದಾರೆ. ಅದೇನೆಂದರೆ, ಎಲ್ಲಾ ಅಮೆರಿಕನ್ನರು ಸ್ವಯಂ ಪ್ರೇರಿತರಾಗಿ ಮಾಸ್ಕ್ ಧರಿಸುವುದು, ದೇಶದಲ್ಲಿ ಶೀಘ್ರದಲ್ಲೇ 100 ಮಿಲಿಯನ್ ಲಸಿಕೆ ಪೂರೈಕೆ ಮಾಡುವ ಭರವಸೆ ಹಾಗೂ ಶೀಘ್ರದಲ್ಲೇ ದೇಶದ ಬಹುಪಾಲು ಶಾಲೆಗಳನ್ನ ಪುನಾರಂಭ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಸಾಮೂಹಿಕ ಒಗ್ಗಟ್ಟಿನಿಂದಲೇ ನಾವು ಈ ಸಾಮೂಹಿಕ ನೋವಿನಿಂದ ಹೊರಬರಲಿದ್ದೇವೆ ಎಂಬ ನಂಬಿಕೆ ನನಗಿದೆ. ಸಾಂಕ್ರಾಮಿಕವನ್ನ ನಿಯಂತ್ರಿಸಿ, ಜೀವಗಳನ್ನ ಉಳಿಸಿ ನಾವು ಮತ್ತೆ ನಮ್ಮ ದೇಶವನ್ನ ಆರೋಗ್ಯಕರ ಮಾಡುತ್ತೇವೆ ಎಂದು ಜೋ ಬಿಡೆನ್ ಹೇಳಿದ್ದಾರೆ.
ಅಮೆರಿಕದಲ್ಲೂ ಶೀಘ್ರದಲ್ಲೇ ಕೊರೊನಾ ಲಸಿಕೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕಾಗಿ ಗುರುವಾರ ಸರ್ಕಾರದ ವೈಜ್ಞಾನಿಕ ಸಲಹೆಗಾರರು ಸಭೆ ಸೇರಲಿದ್ದಾರೆ. ಬ್ರಿಟನ್ನಲ್ಲಿ ಈಗಾಗಲೇ ಫೈಜರ್ ಲಸಿಕೆ ಬಳಕೆಯಾಗುತ್ತಿದೆ. ಹೀಗಾಗಿ ಬಿಡೆನ್ ಕೂಡ ಲಸಿಕೆ ಪೂರೈಕೆಗೆ ಪೂರಕವಾದ ಯತ್ನಗಳನ್ನ ಮಾಡ್ತಿದ್ದಾರೆ.