ದೇಶೀಯ ಮೈಕ್ರೋಬ್ಲಾಗಿಂಗ್ ಕಂಪನಿ ಕೂ, ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಮುಂದಿನ ಒಂದು ವರ್ಷದಲ್ಲಿ ಕೂ ಸಂಸ್ಥೆ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 500ಕ್ಕೆ ಏರಿಸಲಿದೆ.
ಕಂಪನಿಯು ಎಂಜಿನಿಯರಿಂಗ್, ಪ್ರೊಡಕ್ಷನ್ ಮತ್ತು ಕಮ್ಯೂನಿಟಿ ಮ್ಯಾನೇಜ್ಮೆಂಟ್ ನೇಮಕಕ್ಕೆ ಯೋಜನೆ ರೂಪಿಸಿದೆ. ಟ್ವಿಟರ್‌ನ ಮುಖ್ಯ ಪ್ರತಿಸ್ಪರ್ಧಿ ಕೂ, ಇತ್ತೀಚೆಗೆ 10 ಮಿಲಿಯನ್ ಬಳಕೆದಾರರನ್ನು ಹೊಂದಿ, ಉತ್ತಮ ದಾಖಲೆ ಬರೆದಿದೆ. ಕಂಪನಿಯಲ್ಲಿ ಪ್ರಸ್ತುತ 200 ಉದ್ಯೋಗಿಗಳಿದ್ದಾರೆ.
ಕೂ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಂಪನಿಯು ಪ್ರಸ್ತುತ 200 ಉದ್ಯೋಗಿಗಳನ್ನು ಹೊಂದಿದೆ. ಎಂಜಿನಿಯರಿಂಗ್, ಪ್ರೊಡಕ್ಷನ್ ಮತ್ತು ಕಮ್ಯೂನಿಟಿ ಮ್ಯಾನೇಜ್ಮೆಂಟ್ ವಿಭಾಗಗಳಲ್ಲಿ ಹೊಸ ನೇಮಕಾತಿ ನಡೆಯಲಿದ್ದು, ಮುಂದಿನ ಒಂದು ವರ್ಷದಲ್ಲಿ ನಮ್ಮ ಉದ್ಯೋಗಿಗಳ ಸಂಖ್ಯೆ 500ಕ್ಕೆ ತಲುಪಲಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಕಂಪನಿ ಕೂ ಕೂಡ ಮಾರ್ಕೆಟಿಂಗ್, ಬ್ರಾಂಡ್ ಮಾರ್ಕೆಟಿಂಗ್ ನಂತಹ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತದೆ. ಕೆಲಸ ಮಾಡುವ ಮತ್ತು ಭಾರತದ ತಂತ್ರಜ್ಞಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬಲ್ಲ ಅತ್ಯುತ್ತಮ ಪ್ರತಿಭೆಗಳು ನಮಗೆ ಬೇಕೆಂದು ಅವರು ಹೇಳಿದ್ದಾರೆ.
ಒಂದು ವರ್ಷದ ಹಿಂದೆ ಇದನ್ನು ಸ್ಥಾಪಿಸಲಾಗಿದೆ. ಕೂ, ಹಿಂದಿ, ತೆಲುಗು, ಬಾಂಗ್ಲಾ ಸೇರಿದಂತೆ ಇತರ ಹಲವು ಭಾಷೆಗಳಲ್ಲಿ ಲಭ್ಯವಿದೆ.