ಉದ್ಯೋಗಾವಕಾಶಗಳನ್ನು ಕೋರುತ್ತಿರುವ ಹಿರಿಯ ನಾಗರಿಕರಿಗೆ ಅಕ್ಟೋಬರ್ 1ರಿಂದ ಅನೇಕ ಅವಕಾಶಗಳನ್ನು ಒಂದೆಡೆ ತೋರುವ ಎಕ್ಸ್‌ಚೇಂಜ್ ಕಾರ್ಯಕ್ರಮಕ್ಕೆ ಭಾರತ ಸರ್ಕಾರ ಚಾಲನೆ ನೀಡಲಿದೆ.
ಹಿರಿಯ ಶಕ್ತ ಪ್ರಜೆಗಳಿಗೆ ಮರುಉದ್ಯೋಗ ಮತ್ತು ಘನತೆ (ಸೇಕ್ರೆಡ್) ಎಂದು ವಿಸ್ತರಿತ ಅರ್ಥ ಬರುವ ಈ ಪೋರ್ಟಲ್ ನಲ್ಲಿ 60 ವರ್ಷದ ಮೇಲ್ಪಟ್ಟ ಹಿರಿಯ ಪ್ರಜೆಗಳಿಗೆ ಸುಲಭವಾಗಿ ತಮ್ಮದೇ ಮನೆಗಳಿಂದ ಕುಳಿತೇ ಮಾಡುವ ಕೆಲಸ ಕಂಡುಕೊಳ್ಳಲು ನೆರವಾಗಲಿದೆ. ಈ ಪೋರ್ಟಲ್ ಅನ್ನು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ನಿರ್ವಹಿಸುತ್ತಿದೆ.
BIG NEWS: ದೆಹಲಿ ED ಕಚೇರಿಗೆ ವಿಚಾರಣೆಗೆ ಹಾಜರಾದ ಶಾಸಕ ಜಮೀರ್ ಅಹ್ಮದ್
ಯಾವುದೇ ಉದ್ಯೋಗದಾತ ಸಂಸ್ಥೆಗಳು, ಕಂಪನಿಗಳು ಹಾಗೂ ಸ್ವಸಹಾಯ/ಸೇವಾ ಸಂಘಗಳು ಪೋರ್ಟಲ್‌ನಲ್ಲಿ ನೋಂದಾಯಿತರಾಗಬಹುದು ಎಂದು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಪೋರ್ಟಲ್ ಅಭಿವೃದ್ಧಿಗಾಗಿ ಸಚಿವಾಲಯವು 10 ಕೋಟಿ ರೂ. ಗಳನ್ನು ವಿನಿಯೋಗಿಸಿದ್ದು, ಮುಂಬರುವ ದಿನಗಳಲ್ಲಿ ಇನ್ನೂ 10 ಕೋಟಿ ರೂ. ಖರ್ಚು ಮಾಡಿ ಪ್ರಚಾರ ಮಾಡಲಿದೆ.
BIG NEWS: ಪ್ರಾದೇಶಿಕ ಭಾಷೆಗಳಲ್ಲೂ ‘ಆಧಾರ್’ ಅಪ್ ಡೇಟ್ ಗೆ ಅವಕಾಶ ನೀಡಿದ UIDAI
ತಮ್ಮ ಶೈಕ್ಷಣಿಕ ಅರ್ಹತೆಗಳು, ಅನುಭವ, ಕೌಶಲ್ಯ, ಆಸಕ್ತಿ ಇರುವ ಕ್ಷೇತ್ರಗಳ ವಿವರಗಳನ್ನು ಹಂಚಿಕೊಂಡು ಹಿರಿಯ ನಾಗರಿಕರು ತಮ್ಮ ಪ್ರೊಫೈಲ್‌ಗೆ ತಕ್ಕನಾದ ಕೆಲಸ ಹುಡುಕಬಹುದಾಗಿದೆ.