1. ನಗರ ಪ್ರದೇಶಗಳಲ್ಲಿ, ಎಲ್ಲಾ ವಯೋಮಾನದವರಲ್ಲಿ ನಿರುದ್ಯೋಗದ ದರವು ಜನವರಿ-ಮಾರ್ಚ್ 2021ರ ತ್ರೈಮಾಸಿಕದಲ್ಲಿ 9.4%ಗೆ ಎರಿಕೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ, ಇದೇ ವರ್ಗದವರ ಪೈಕಿ ನಿರುದ್ಯೋಗದ ದರ 9.1%ನಷ್ಟಿತ್ತು.
2. ಮಹಿಳೆಯರಲ್ಲಿ ನಿರುದ್ಯೋಗದ ಪ್ರಮಾಣವು 11.8%ಗೆ ಏರಿಕೆ ಕಂಡಿದೆ. ಕಳೆದ ವರ್ಷದ ಇದೇ ಪ್ರಮಾಣ 10.5%ನಷ್ಟಿತ್ತು.
ಕಂದಾಯ ಇಲಾಖೆ ನೇಮಕಾತಿ: 3 ಸಾವಿರ ಭೂಮಾಪಕರ ಆಯ್ಕೆಗೆ ಆನ್‍ಲೈನ್ ಅರ್ಜಿ ಆಹ್ವಾನ
3. ನಗರದ ಪ್ರದೇಶದ ಪುರುಷರ ಪೈಕಿ ನಿರುದ್ಯೋಗದ ಪ್ರಮಾಣವು 8.6%ಗೆ ಇಳಿಕೆ ಕಂಡಿದೆ. ಕಳೆದ ವರ್ಷದ ಇದೇ ಪ್ರಮಾಣ 9.5%ರಷ್ಟಿದೆ.
4. 15 ವರ್ಷ ಮೇಲ್ಪಟ್ಟ ಮಂದಿಯ ಪೈಕಿ ಕಾರ್ಮಿಕ ಶಕ್ತಿಯಲ್ಲಿ ಭಾಗಿಯಾದವರ ಪ್ರಮಾಣವು ಇದೇ ತ್ರೈಮಾಸಿಕದಲ್ಲಿ 47.5%ನಷ್ಟು ಇದೆ. ಕಳೆದ ವರ್ಷ ಇದೇ ಪ್ರಮಾಣವು 48.1%ನಷ್ಟಿತ್ತು.
5. 15 ವರ್ಷ ಮೇಲ್ಪಟ್ಟ ಮಂದಿಯ ಪೈಕಿ ಕೆಲಸ ಮಾಡುವ ಜನಸಂಖ್ಯೆಯ ಪ್ರಮಾಣವು 43.1% ಇದ್ದು, ಇದು ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 43.7%ನಿಂದ ಇಳಿಕೆಯಾಗಿದೆ.