ಹಾಸನ: ಸ್ಟಾಪ್ ಸೆಲೆಕ್ಷನ್ ಕಮಿಷನ್(SSC) – ಕಂಬೈಂಡ್ ಗ್ರಾಜ್ಯುಯೆಟ್ ಲೆವೆಲ್ ಎಕ್ಸಾಮಿನೇಷನ್ – 2020 ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಸಿಸ್ಟೆಂಟ್, ಇನ್ಸ್ ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್, ಇನ್ಸ್ ಪೆಕ್ಟರ್ ಎಕ್ಸೈಸ್, ಸಬ್ ಇನ್ಸ್ ಪೆಕ್ಟರ್ಸ್ ಸಿಬಿಐ, ಎನ್ಐಎ, ಎನ್.ಸಿಬಿ., ಡಿವಿಜನಲ್ ಅಕೌಂಟೆಂಟ್, ಆಡಿಟರ್, ಟ್ಯಾಕ್ಸ್ ಅಸಿಸ್ಟೆಂಟ್ ಇನ್ನೂ ಮುಂತಾದ 6506 ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ.
ವಿದ್ಯಾರ್ಹತೆ: ಯಾವುದೇ ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ವಯೋಮಿತಿ: 18 ರಿಂದ 27 ವರ್ಷಗಳು, ಪರಿಶಿಷ್ಟ ಜಾತಿ/ಪಂಗಡ/ ಓಬಿಸಿ/ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ನಿಯಮಾನುಸಾರ ರಿಯಾಯಿತಿ ಇರುತ್ತದೆ ಅರ್ಜಿ ಸಲ್ಲಿಸಲು ಜ.31 ಅಂತಿಮ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ http://ssckkr.kar.nic.in ಅಥವಾ http://ssc.nic.in ನಲ್ಲಿ ಲಭ್ಯವಿರುವ ಮಾಹಿತಿಯನ್ನು ಪಡೆಯುವುದು. ಹಾಗೂ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಅವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08172 – 296374 ಅನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.