ನವದೆಹಲಿ: ಮಾನದಂಡ ಪರಿಗಣಿಸದೆ ಅನುಕಂಪದ ನೌಕರಿ ನೀಡುವುದು ತಪ್ಪು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದ್ದು, ಈ ಕುರಿತಂತೆ ಹೈಕೋರ್ಟ್ನಿಂರ್ಟ್ ನಿಂದ ನೀಡಲಾಗಿದ್ದ ಆದೇಶವನ್ನು ರದ್ದು ಮಾಡಲಾಗಿದೆ.
ಕರ್ನಾಟಕದ ಭೀಮೇಶ್ ಎಂಬುವವರ ಅವಿವಾಹಿತ ಅಕ್ಕ ಶಿಕ್ಷಕ ವೃತ್ತಿಯಲ್ಲಿದ್ದರು. ಅವರು ಮೃತಪಟ್ಟಿದ್ದರಿಂದ ಅವರ ನೌಕರಿಯನ್ನು ತನಗೆ ನೀಡಬೇಕು ಎಂದು ಭೀಮೇಶ್ ಅರ್ಜಿ ಸಲ್ಲಿಸಿದ್ದು, ರಾಜ್ಯ ಸರ್ಕಾರ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಕರ್ನಾಟಕ ಹೈಕೋರ್ಟ್ ಅರ್ಜಿಯನ್ನು ಮಾನ್ಯ ಮಾಡಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಈ ಕುರಿತಾಗಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆದು ಹೈಕೋರ್ಟ್ ಆದೇಶವನ್ನು ರದ್ದು ಮಾಡಲಾಗಿದೆ.
ಮಾನದಂಡವನ್ನು ಪರಿಗಣಿಸದೆ ಅನುಕಂಪದ ನೌಕರಿ ನೀಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಅನುಕಂಪದ ಆಧಾರದ ಮೇಲೆ ವ್ಯಕ್ತಿಯ ಹಣಕಾಸು ಪರಿಸ್ಥಿತಿ ಮೇಲೆ ಆತ ಅಥವಾ ಆಕೆ ಹೊಂದಿರುವ ಆರ್ಥಿಕ ಅವಲಂಬನೆ, ಕುಟುಂಬದಲ್ಲಿರುವ ಇತರರ ಉದ್ಯೋಗ ಆದಾಯ ಇತ್ಯಾದಿ ಮಾನದಂಡಗಳನ್ನು ಕೂಡ ಪರಿಗಣಿಸಬೇಕು ಎಂದು ಹೇಳಲಾಗಿದೆ.