ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಕುವೈತ್ ದೇಶದಲ್ಲಿ ಮನೆಕೆಲಸಕ್ಕೆ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದು, ಅರ್ಹ ಮಹಿಳೆಯರಿಂದ ನೋಂದಣಿಗೆ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.
ಆಸಕ್ತ ಅಭ್ಯರ್ಥಿಗಳು https://kvtsdc.com ನಲ್ಲಿ ನೊಂದಾಯಿಸಿಕೊಳ್ಳಬಹುದು.
ಅರ್ಹತೆಗಳು:
ವಯಸ್ಸು 30ರಿಂದ 45 ವರ್ಷದವಾಗಿರಬೇಕು. ಅನುಭವಿಗಳ ಮತ್ತು ಹೊಸಬರಿಗೆ ಅವಕಾಶ, ವೇತನ 30ಸಾವಿರದಿಂದ 32 ಸಾವಿರ ರೂ.ವರೆಗೆ ಇರುತ್ತದೆ. 2 ವರ್ಷದ ಅವಧಿಯವರೆಗೆ ಒಪ್ಪಂದ ಇರುತ್ತದೆ. ವೀಸಾ, ವಿವೀ ಸ್ಟಾಂಪಿಂಗ್, ವಿಮಾನ ಟಿಕೇಟ್, ಪಿಸಿಸಿ, ಪಿಡಿಓಟಿ, ಎಮಿಗ್ರೇಷನ್ ಕ್ಲಿಯರನ್ಸ್ ಹಾಗೂ ಊಟ ಮತ್ತು ವಸತಿ ಸಂಪೂರ್ಣ ಉಚಿತವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಎಸ್‍ಪಿ ಸರ್ಕಲ್ ಹತ್ತಿರದ ಪಾರ್ವತಿ ನಗರದ ಬಸವಭವನ ರಸ್ತೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿವಾಸದ ಎದುರಿನ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಅಥವಾ ಮೊ.8073852104, 9964502514 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.