alex Certify ‘ನನಗೆ ಈ ಕೆಲಸ ಸಿಗದಿದ್ದರೆ ಮದುವೆಯಾಗಲು ಸಾಧ್ಯವಾಗುವುದಿಲ್ಲ’; ಅರ್ಜಿಯಲ್ಲಿ ಅಳಲು ತೋಡಿಕೊಂಡ ಉದ್ಯೋಗಾಕಾಂಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನನಗೆ ಈ ಕೆಲಸ ಸಿಗದಿದ್ದರೆ ಮದುವೆಯಾಗಲು ಸಾಧ್ಯವಾಗುವುದಿಲ್ಲ’; ಅರ್ಜಿಯಲ್ಲಿ ಅಳಲು ತೋಡಿಕೊಂಡ ಉದ್ಯೋಗಾಕಾಂಕ್ಷಿ

ಉದ್ಯೋಗ ಪಡೆಯಲು ಆಯ್ಕೆಯ ಹಲವು ಸುತ್ತುಗಳನ್ನು ಎದುರಿಸಬೇಕಾಗುತ್ತದೆ. ಮುಖಾಮುಖಿ ಸಂದರ್ಶನ ಸೇರಿದಂತೆ ಹಲವು ಹಂತಗಳನ್ನು ಎದುರಿಸುವ ಉದ್ಯೋಗಾಕಾಂಕ್ಷಿಗಳು ಸಂದರ್ಶಕರು/ ಕಂಪನಿ ಕೇಳುವ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಅಂತಹ ಹಂತವೊಂದರಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ್ದವನ ಉತ್ತರ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನಗೆಗಡಲಲ್ಲಿ ತೇಲಿಸಿದೆ.

ಅರ್ವಾ ಹೆಲ್ತ್ ನ ಸಂಸ್ಥಾಪಕ ಮತ್ತು ಸಿಇಓ ದಿಪಾಲಿ ಬಜಾಜ್, ಫುಲ್ ಸ್ಟಾಕ್ ಇಂಜಿನಿಯರ್ ಪಾತ್ರಕ್ಕಾಗಿ ಬಂದಿದ್ದ ಅರ್ಜಿಗಳನ್ನು ಪರಿಶೀಲಿಸುತ್ತಿದ್ದಾಗ, “ನೀವು ಈ ಪಾತ್ರಕ್ಕೆ ಏಕೆ ಸರಿಹೊಂದುತ್ತೀರಿ?” ಎಂಬ ಪ್ರಶ್ನೆಗೆ ಅರ್ಜಿದಾರ ಅನಿರೀಕ್ಷಿತ ಮತ್ತು ವಿನೋದಕರ ಪ್ರತಿಕ್ರಿಯೆ ನೀಡಿದ್ದನ್ನು ನೋಡಿ ತಮಾಷೆ ಮಾಡಿದ್ದಾರೆ.

ಉದ್ಯೋಗಾಕಾಂಕ್ಷಿಯ ಉತ್ತರವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅರ್ವಾ ಹೆಲ್ತ್ ನ ಸಿಇಒ, ದಿಪಾಲಿ ಬಜಾಜ್ ಹಂಚಿಕೊಂಡಿದ್ದು, ಅರ್ಜಿ ನಮೂನೆಯಲ್ಲಿ ಈ ಪಾತ್ರಕ್ಕೆ ನೀವು ಏಕೆ ಸೂಕ್ತವೆಂದು ಭಾವಿಸುತ್ತೀರಿ ಎಂದು ಕೇಳಿದಾಗ ಉದ್ಯೋಗಾಕಾಂಕ್ಷಿಯು ಉತ್ತರಿಸುತ್ತಾ, “ನಾನು ಈ ಪಾತ್ರದ ಅವಶ್ಯಕತೆಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುವ ಫುಲ್‌ಸ್ಟಾಕ್‌ನ ವಿಶಿಷ್ಟ ಹೊಂದಾಣಿಕೆಯನ್ನು ತರುತ್ತೇನೆ ಎಂದು ನಂಬುತ್ತೇನೆ. ಅಲ್ಲದೆ ನನಗೆ ಈ ಕೆಲಸ ಸಿಗದಿದ್ದರೆ ನನ್ನ ಬಾಲ್ಯದ ಪ್ರೀತಿಯನ್ನು ನಾನು ಎಂದಿಗೂ ಮದುವೆಯಾಗಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆಕೆಯ ತಂದೆ ನಿನಗೆ ಉತ್ತಮ ಉದ್ಯೋಗ ಸಿಕ್ಕರೆ ಮಾತ್ರ ನನ್ನ ಮಗಳನ್ನು ಮದುವೆಯಾಗಬಹುದು ಎಂದಿದ್ದಾರೆ” ಎಂದು ಅರ್ಜಿದಾರರು ಬರೆದಿದ್ದಾರೆ.

ಈ ವಿನೋದಮಯ ಉತ್ತರ ಹಂಚಿಕೊಂಡಿರುವ ಸಿಇಓ ದಿಪಾಲಿ ಬಜಾಜ್, “ನೇಮಕಾತಿ ಕೂಡ ವಿನೋದಮಯವಾಗಿರಬಹುದು” ಎಂದು ಬರೆದಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ ಈ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ ನಂತರ ಹಲವು ಇಂಟರ್ನೆಟ್ ಬಳಕೆದಾರರ ಗಮನ ಸೆಳೆದಿದ್ದು ತಮಾಷೆ ಮಾಡಿದ್ದಾರೆ.

— Dipalie (@dipalie_) June 13, 2024

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...